ಮಂಡ್ಯ : ನೀರು ಎಲ್ಲಿಂದ ಬರುತ್ತದೆ, ಉತ್ಪತ್ತಿ ಮಾಡೋದಕ್ಕೆ ಆಗುತ್ತಾ? ಇದು ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಏಕೆ ಅರ್ಥವಾಗುತ್ತಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಪೊಲಿಟಿಕಲ್ 360 ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಮಿಳುನಾಡು ಬೆಳೆ ಬೆಳೆಯಲು ನೀರು ಕೇಳ್ತಿದೆ. ಆದರೆ ನಾವು ಕುಡಿಯಲು ನೀರು ಕೇಳ್ತಿದ್ದೇವೆ. ಕೊಡುತ್ತಿರುವ ಆದೇಶ ಪಾಲಿಸಿದ್ರೆ ನೀರು ಖಾಲಿಯಾಗಿ ಬಿಡುತ್ತದೆ. ಆಗ ಅರ್ಧ ಬೆಂಗಳೂರಿಗೂ ನೀರು ಸಾಲಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಯಾವ ಆಧಾರದ ಮೇಲೆ, ಯಾವ ಅಂಕಿ ಅಂಶ ಇಟ್ಕೊಂಡು ನೀರು ಬಿಡಲು ಆದೇಶ ಮಾಡಿದೆ ಅಂತ ಗೊತ್ತಾಗ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಚೈತ್ರಾ ವಂಚನೆ ಕೇಸ್ : ವಿನಯ್ ಗುರೂಜಿ, ವಿಹೆಚ್ಪಿ, ಭಜರಂಗದಳ ಮುಖಂಡರಿಗೆ ಸಿಸಿಬಿ ನೋಟಿಸ್
ನೀರು ಬಿಡದಂತೆ ಸರ್ಕಾರ ಧೃಡ ನಿರ್ಧಾರ ಮಾಡಬೇಕು ಎಂದ ಅವರು, ಎಂದಿಗಿಂತ 700-800 ಕ್ಯೂಸೆಕ್ ಹೆಚ್ಚು ನೀರು ಬಿಡಲಾಗಿದೆ. ಆದರೆ ನೀರನ್ನು ಬಿಡಬಾರದು ಎಂಬುದು ನಮ್ಮ ನಿಲುವು. ತಜ್ಞರ ತಂಡ ಇಲ್ಲಿಗೆ ಬಂದು ಪರಿಸ್ಥಿತಿ ಅವಲೋಕಿಸಿ ನಂತರ ಆದೇಶ ನೀಡಲಿ. ದೆಹಲಿಯಲ್ಲಿ ಕುಳಿತು ಆದೇಶ ಮಾಡೋದು ನ್ಯಾಯ ಸಮ್ಮತವಲ್ಲ. ಹೀಗಿರುವಾಗ ಸುಪ್ರೀಂ ಕೋರ್ಟ್ ಕೂಡ ಪ್ರಾಧಿಕಾರದ ಆದೇಶವನ್ನೇ ಎತ್ತಿ ಹಿಡಿಯಬಹುದು ಎಂಬುದು ನಮ್ಮ ಆತಂಕವಾಗಿದೆ. ಹಾಗಾಗಿ ಸುಪ್ರೀಂಗೆ ಹೇಗೆ ಮನವರಿಕೆ ಮಾಡಿಕೊಡಬೇಕು ಎನ್ನುವ ಸಿದ್ದತೆಯಲ್ಲಿದ್ದೇವೆ ಎಂದರು.
ಇದನ್ನೂ ಓದಿ : ಅನರ್ಹತೆಗೆ ತಡೆ ಬೆನ್ನಲ್ಲೇ ದೆಹಲಿಗೆ ತೆರಳಿದ ಪ್ರಜ್ವಲ್; ವಿಶೇಷ ಅಧಿವೇಶನದಲ್ಲಿ ಭಾಗಿ
ನೀರಿಲ್ಲದೆ ರಾಜ್ಯದ ಕೆಲ ಭಾಗ ಕಂಗಲಾಗಿದೆ ಎಂದ ಪುಟ್ಟಣ್ಣಯ್ಯ, ಸೋಷಿಯಲ್ ಮತ್ತು ಎಕಾನಾಮಿಕ್ ಇಂಪ್ಯಾಕ್ಟ್ ಅಂಶ ಉಲ್ಲೇಖಿಸಿ ನಾವು ಕಾವೇರಿ ನೀರು ವಿಚಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದೇವೆ. ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.