ಜಾರ್ಖಂಡ್: ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ನೌಕೆಯನ್ನು ಇಳಿಸಿದ್ದ ಭಾರತದ ಕಾರ್ಯಕ್ಕೆ ಇಡೀ ವಿಶ್ವ ಅಭಿನಂದಿಸಿತ್ತು. ಇದಾದ ಬಳಿಕ ರೋವರ್ ಚಂದ್ರನ ಮೇಲೆ ಓಡಾಟ ನಡೆಸಿ ಭಾರತದ ಹೆಸರು ಅಚ್ಚೊತ್ತಿದೆ. ಆದರೆ ಚಂದ್ರಯಾನ್-3 ಯೋಜನೆಯ ಲಾಂಚ್‌ಪ್ಯಾಡ್ ನಿರ್ಮಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದ ಸಿಬ್ಬಂದಿಯೊಬ್ಬರು ವೇತನ ಸಿಗದೆ ಈಗ ಇಡ್ಲಿ ಮಾರಾಟ ಮಾಡುತ್ತಿದ್ದಾರೆ.
ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ದೀಪಕ್ ಕುಮಾರ್ ಉಪ್ರಾರಿಯಾ ಎಂಬಾತ ಇಸ್ರೋದ ಚಂದ್ರಯಾನ್-3 ರ ಲಾಂಚ್‌ಪ್ಯಾಡ್ ನಿರ್ಮಿಸುವಲ್ಲಿ ಕೆಲಸ ಮಾಡಿದರು, ಆದರೆ ಚಂದ್ರಯಾನದ ಐತಿಹಾಸಿಕ ಯಶಸ್ಸಿನ ನಂತರವೂ ದೀಪಕ್ ರಾಂಚಿಯ ರಸ್ತೆಬದಿಯ ಅಂಗಡಿಯಲ್ಲಿ ಇಡ್ಲಿಗಳನ್ನು ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: 2027ರ ನಂತರವಷ್ಟೇ ಮಹಿಳಾ ಮೀಸಲಾತಿ ಜಾರಿ; ಇಷ್ಟು ತಡವಾಗೋದು ಯಾಕೆ?
ಚಂದ್ರಯಾನ-3 ಬಾಹ್ಯಾಕಾಶ ನೌಕೆಗೆ ಅಗತ್ಯವಾಗಿದ್ದ ಲಾಂಚ್‌ಪ್ಯಾಡ್ ನಿರ್ಮಿಸುವ ತಂಡದಲ್ಲಿ ದೀಪಕ್ ಕೆಲಸ ಮಾಡಿದ್ದರು. ಆದರೆ ಕಳೆದ 18 ತಿಂಗಳಿನಿಂದ ವೇತನ ಸಿಗದೆ ಅವರೀಗ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಸುಮಾರು 2,800 ಸಿಬ್ಬಂದಿಗೆ 18 ತಿಂಗಳುಗಳಿಂದ ವೇತನವಾಗಿಲ್ಲ ಎಂದು ಅಂತರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವರದಿಯ ಪ್ರಕಾರ, ದೀಪಕ್ ಕುಮಾರ್ ಉಪ್ರಾರಿಯಾ ಅವರು ಇನ್ನೂ ವೇತನದ ಭರವಸೆಯಲ್ಲಿ HECಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ತಮ್ಮ ಕೆಲಸ ಮುಗಿಸಿದ ಬಳಿಕ ಇಡ್ಲಿ ಮಾರಾಟ ಮಾಡುತ್ತಿದ್ದಾರೆ.
ಇದನ್ನೂ ಓದಿ: ಹೊಸ ಸಂಸತ್ ಮುಂದೆ ಸಂಸದ ತೇಜಸ್ವಿ ಸೂರ್ಯ ಪೋಸ್!
ಈ ಕುರಿತು ಪ್ರತಿಕ್ರಿಯಿಸಿರುವ ದೀಪಕ್,’ ಮನೆ ನಿರ್ವಹಣೆಗೆಂದು ಮೊದಲು 2 ಲಕ್ಷ ರೂಪಾಯಿ ಸಾಲ ಮಾಡಿದ್ದೆ, ಬರುಬರುತ್ತಾ ಈ ಸಾಲ 4 ಲಕ್ಷ ರೂಪಾಯಿಗೆ ಹೆಚ್ಚಾಯಿತು. ನಂತರ ನಾನು ನನ್ನ ಹೆಂಡತಿಯ ಚಿನ್ನಾಭರಣಗಳನ್ನು ಅಡಮಾನವಿಟ್ಟು ಕೆಲವು ದಿನ ಮನೆ ನಡೆಸಿದ್ದೇನೆ. ಆದರೆ ಇದೂ ಸಾಕಾಗುತ್ತಿಲ್ಲ ಹೀಗಾಗಿ ಜೀವನ ನಿರ್ವಹಣೆಗಾಗಿ ಇಡ್ಲಿ ಮಾರಾಟಕ್ಕಿಳಿದೆ ಎಂದಿದ್ದಾರೆ.
ಈ ರೀತ ಇಡ್ಲಿ ಮಾರಾಟದಿಂದ ನನಗೆ ನಿತ್ಯ 300 ರಿಂದ 400 ರೂಪಾಯಿ ಸಿಗುತ್ತವೆ. ಇದರಲ್ಲಿ 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಲ್ಲಿ ನನ್ನ ಮನೆ ಖರ್ಜು ನಿಭಾಯಿಸುತ್ತೇನೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.