ಬೀದರ್: ಎಸ್‌ಡಿಪಿಐ-ಪಿಎಫ್ಐ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿ, ಕಾಂಗ್ರೆಸ್ನ ಬಿ ಟಿಮ್ನಂತೆ ಎಸ್‌ಡಿಪಿಐ-ಪಿಎಫ್ಐ ಕೆಲಸ ಮಾಡುತ್ತಿದ್ದು, ಪಿಎಫ್ಐ ಕಾರ್ಯಕರ್ತರು ಎಸ್‌ಡಿಪಿಐ ಜೊತೆ ಸೇರಿಕೊಳ್ಳುತ್ತಿರುವುದು ಗೊತ್ತಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ ನೋಡಿ ಜನ ವೋಟ್ ಹಾಕ್ತಾರೆ,ಫಸ್ಟ್ ಟೈಮ್ ವೋಟ್ ಮಾಡುವ ಯುವಕರು ಪ್ರಧಾನಿ ಮೋದಿ ಪರವಾಗಿದ್ದಾರೆ. ಎಸ್‌ಡಿಪಿಐ ವಿರುದ್ಧ ಕಾಂಗ್ರೆಸ್ ಮಾತನಾಡದೇ ಇರೋದಕ್ಕೆ ವೋಟ್ ಬ್ಯಾಂಕ್ ರಾಜಕೀಯ ಕಾರಣ ಎಂದು ತಿಳಿಸಿದರು.
ಬಿಜೆಪಿ ಪೂರ್ಣ ಬಹುಮತ ಬಂದರೇ ಒಳ್ಳೆ ನಿರ್ಧಾರಗಳು ತೆಗೆದುಕೊಳ್ಳಲು ಅನುಕೂಲ ಆಗುತ್ತೆ. ಚೌಚೌ ಬಾತ್ ಸರ್ಕಾರ ಬಂದರೇ ರಾಜ್ಯದಲ್ಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ, ಎಸ್‌ಡಿಪಿಐ, ಪಿಎಫ್ ಐ ಗೆ ಇರುವ ಸಂಬಂಧದ ಸತ್ಯತೆ ಗೊತ್ತಾಗಬೇಕು ,ಕಾಂಗ್ರೆಸ್ ನ ಮಾನಸಿಕತೆ ಏನು ಎಂದು ಜನರಿಗೆ ತಿಳಿಯಬೇಕು ಎಂದರು.