ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. ಪಕ್ಷವು ಒಟ್ಟು 6 ಭರವಸೆಗಳನ್ನು ಪಟ್ಟಿ ಮಾಡಿದೆ. ಜೊತೆಗೆ ಕಮಿಷನ್ ರಾಜ್ ಮತ್ತು ಬಿಆರ್‌ಎಸ್‌ನ ಲೂಟಿಯಿಂದ ತೆಲಂಗಾಣ ಹೋರಾಟವನ್ನು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.
ತೆಲಂಗಾಣ ಜನತೆಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ ಮತ್ತು ಅನಿಯಂತ್ರಿತ ಪ್ರಗತಿಯನ್ನು ಒದಗಿಸಲು ತಮ್ಮ ಪಕ್ಷ ಸಂಕಲ್ಪ ಮಾಡಿದೆ ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ: ಡೀಪ್‌ಫೇಕ್ ವಿಡಿಯೋಗಳು ದೊಡ್ಡ ಆತಂಕಕಾರಿ ಬೆಳವಣಿಗೆ: ಪ್ರಧಾನಿ ಮೋದಿ
‘ಮಹಾಲಕ್ಷ್ಮಿ’ ಯೋಜನೆಯಡಿ ಮಹಿಳೆಯರಿಗೆ 2,500 ರೂ. 500ರ ರೂಪಾಯಿಗೆ ಗ್ಯಾಸ್ ಸಿಲಿಂಡರ್ ಮತ್ತು ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ನೀಡುವ ಭರವಸೆಯನ್ನು ಪಕ್ಷ ನೀಡಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ‘ಗೃಹ ಜ್ಯೋತಿ’ ಅಡಿಯಲ್ಲಿ ಎಲ್ಲ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದಿದೆ.
ಸ್ವಂತ ಮನೆ ಇಲ್ಲದ ಕುಟುಂಬಗಳಿಗೆ ನಿವೇಶನ ನೀಡಲಾಗುವುದು ಹಾಗೂ ‘ಇಂದಿರಮ್ಮ ಇಂಡ್ಲು’ ಯೋಜನೆಯಡಿ ಮನೆ ನಿರ್ಮಾಣಕ್ಕೆ ₹5 ಲಕ್ಷ ನೀಡಲಾಗುವುದು ಎಂದಿದೆ. ‘ಯುವ ವಿಕಾಸಂ’ ಯೋಜನೆಯಡಿ ವಿದ್ಯಾರ್ಥಿಗಳಿಗೆ ₹5 ಲಕ್ಷ ನೆರವು ನೀಡಲಾಗುವುದು. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಂತೆ ಎಲ್ಲಾ ತೆಲಂಗಾಣ ಚಳವಳಿ ಹೋರಾಟಗಾರರಿಗೆ 250 ಚದರ ಗಜಗಳ ಮನೆ ನಿವೇಶನ ನೀಡಲಾಗುವುದು ಎಂದು ಭರವಸೆ ನೀಡಿದೆ.
ಇದನ್ನೂ ಓದಿ: ನಾಲ್ಕು ನಗರಗಳಲ್ಲಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ದರ ಇಳಿಕೆ!
ಜೊತೆಗೆ ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ನೇಕಾರರು, ಏಡ್ಸ್ ಮತ್ತು ಫೈಲೇರಿಯಾ ರೋಗಿಗಳು ಮತ್ತು ಡಯಾಲಿಸಿಸ್‌ಗೆ ಒಳಗಾಗುವ ಕಿಡ್ನಿ ರೋಗಿಗಳಿಗೆ ‘ಚೀಯುತ’ ಯೋಜನೆಯಡಿ ತಿಂಗಳಿಗೆ ₹ 4,000 ಪಿಂಚಣಿ ನೀಡಲಾಗುವುದು. ₹10 ಲಕ್ಷ ಮೌಲ್ಯದ ಆರೋಗ್ಯ ವಿಮೆ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
‘ಪ್ರಧಾನಿ ಮೋದಿ ಮತ್ತು ಕೆಸಿಆರ್ (ಕೆ ಚಂದ್ರಶೇಖರ ರಾವ್) ಎಷ್ಟೇ ಪ್ರಯತ್ನ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಏಕೆಂದರೆ ಜನರು ಇಲ್ಲಿನ ಹಗರಣಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಕೆಸಿಆರ್ ಅವರ ನಿವೃತ್ತಿಯ ದಿನಗಳು ಹತ್ತಿರವಾಗಿವೆ ಎಂದು ಖರ್ಗೆ ಈ ವೇಳೆ ವಾಗ್ದಾಳಿ ನಡೆಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.