Monday, December 11, 2023
spot_img
- Advertisement -spot_img

ಭಾರತದಲ್ಲಿ 1.9 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಟೆಸ್ಲಾ!

ನವದೆಹಲಿ: ಅಮೆರಿಕ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಟೆಸ್ಲಾ ಸುಮಾರು 1.9 ಬಿಲಿಯನ್ ಡಾಲರ್ ಮೌಲ್ಯದ ಘಟಕಗಳನ್ನು ತೆರೆಯಲು ಮುಂದಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಟೆಸ್ಲಾದ ಈ ಬೆಳವಣಿಗೆಯಿಂದ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದಿದ್ದಾರೆ. ಟೆಸ್ಲಾ ಈಗಾಗಲೇ ಕಳೆದ ವರ್ಷ ಒಂದು ಬಿಲಿಯನ್ ಡಾಲರ್ ಮೌಲ್ಯದ ಘಟಕ ಸ್ಥಾಪಿಸಿದೆ. ನನ್ನ ಬಳಿ ಟೆಸ್ಲಾಗೆ ಸರಬರಾಜು ಮಾಡುವ ಕಂಪನಿಗಳ ಪಟ್ಟಿ ಇದೆ. ಈ ವರ್ಷ ಅವರ ಗುರಿ ಸುಮಾರು 1.7 ಬಿಲಿಯನ್ ಡಾಲರ್‌ ಅಥವಾ 1.9 ಶತಕೋಟಿ ಡಾಲರ್‌ಗೆ ಏರಿಕೆಯಾಗಬಹುದು ಎಂದು ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: Nitin Gadkari : ಕಾರುಗಳಿಗೆ 6 ಏರ್ ಬ್ಯಾಗ್ ಕಡ್ಡಾಯವಲ್ಲ; ಉಲ್ಟಾ ಹೊಡೆದ ನಿತಿನ್ ಗಡ್ಕರಿ!

ಭಾರತವು ಅವರಿಗೆ ಉತ್ತಮ ವ್ಯಾಪಾರ ವಾತಾವರಣ, ಕೌಶಲ್ಯ, ದೊಡ್ಡ ಮಾರುಕಟ್ಟೆ ಮತ್ತು 1.4 ಶತಕೋಟಿ ಜನರಿಂದ ಉತ್ಪತ್ತಿಯಾಗುವ ಬೇಡಿಕೆಯನ್ನು ಒದಗಿಸಲಿದೆ. ಜಾಗತಿಕ ಸಂಸ್ಥೆಗಳು ಚೀ‍ನಾ ಬದಲಿಗೆ ಭಾರತದಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಿವೆ, ಭಾರತವೂ ಅಂತಹ ಸಂಸ್ಥೆಗಳಿಗೆ ಸ್ವಾಗತಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: All-Party Meeting : ವಿಶೇಷ ಅಧಿವೇಶನದ ಹಿಂದಿನ ದಿನ ಸರ್ವಪಕ್ಷ ಸಭೆ ಕರೆದ ಕೇಂದ್ರ

ಎಲೆಕ್ಟ್ರಿಕ್ ಆಟೋ ಉದ್ಯಮವು ವಿಶ್ವಾದ್ಯಂತ ಬೆಳೆದಂತೆ ಭಾರತದಲ್ಲೂ ಬೆಳವಣಿಗೆ ಕಾಣಲಿದೆ. ಟ್ಯಾಕ್ಸಿಗಳು ಮತ್ತು ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಭಾರತವು ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ಬಳಕೆಯ ತಾಣವಾಗುತ್ತಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ಹೂಡಿಕೆಯು ಹೆಚ್ಚುತ್ತಿದೆ. ನಾವು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿರುವುದು ಆರ್ಥಿಕತೆಯ ಫಲ ಅನುಭವಿಸಲು ಭವಿಷ್ಯದಲ್ಲಿ ನಿರೀಕ್ಷಿಸಬಹುದು ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles