ದೊಡ್ಡಬಳ್ಳಾಪುರ : ಮೋದಿಯವರು ಬಂದಾಗ ಆ ಸಮಯದಲ್ಲಿ ಬಿಜೆಪಿ, ಕಾಂಗ್ರೆಸ್ ಎಲ್ಲಿದ್ದರು ಎಂಬುದು ಮುಖ್ಯವಾದದ್ದು ಅಲ್ಲ, ಪ್ರಧಾನಿ ಅಭಿನಂದನೆ ಸಲ್ಲಿಸಲಿಕ್ಕೆ ಬಂದಿದ್ದೇ ಒಂದು ದೊಡ್ಡ ವಿಷಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಬಿಜೆಪಿ ಶಾಸಕರನ್ನು ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು. ಇದು ದೇಶದ ಜನರ ಎದೆ ಉಬ್ಬಿಸುವಂತಹ ಕೆಲಸ, ಹಾಗಾಗಿ ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ, ಈ ರೀತಿ ಏನೇ ಮಾಡಿದರೂ ಇಸ್ರೋ ವಿಜ್ಞಾನಿಗಳಿಗೆ ಅವಮಾನ ಮಾಡಿದಂತೆ ಆಗುತ್ತೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ‘ಮಣಿಪುರದಲ್ಲಿ ಜನ ಸಾಯುವಾಗ ಸುಮ್ಮನಿದ್ದು, ರಾಕೆಟ್ ಬಿಟ್ಟ ತಕ್ಷಣ ಓಡಿ ಬರುತ್ತಾರೆ’
ಚಂದ್ರಯಾನ ಸಕ್ಸಸ್ ಇಸ್ರೋ ವಿಜ್ಞಾನಿಗಳಿಗೆ ಕೀರ್ತಿ ಸಲ್ಲಿಕೆ ಆಗಬೇಕು, ಅವರಿಗೆ ಪ್ರೋತ್ಸಾಹ, ಅಭಿನಂದನೆ ಸಲ್ಲಿಸಬೇಕಾದದ್ದು ಪ್ರಧಾನಿಯವರ ಕೆಲಸ ಹಾಗಾಗಿ ಅವರು ಬಂದಿದ್ದಾರೆ ಎಂದು ತಿಳಿಸಿದರು. ತಿರುಪತಿ ಪೂಜೆ ವಿಚಾರವಾಗಿ ಮಾತನಾಡಿ, ಆಧ್ಯಾತ್ಮ ಮತ್ತು ವಿಜ್ಞಾನ ಎರಡೂ ಇದ್ದು, ಹಾಗಾಗಿ ಬುದ್ದಿ ಜೀವಿಗಳು ಈ ವಿಚಾರದಲ್ಲಿ ಮೂಗು ತೂರಿಸುವುದು ಬೇಡ,ಇದು ಒಂದು ರೀತಿ ಒಂದೇ ನಾಣ್ಯದ ಎರಡು ಮುಖ, ಇದರಲ್ಲಿ ಬುದ್ದಿ ಜೀವಿಗಳು ಮೂಗು ತೂರಿಸುವುದು ಮೂರ್ಖತನ, ಇಂತಹವರು ನಮ್ಮ ದೇಶದಲ್ಲಿ ಹುಟ್ಟಬಾರದಿತ್ತು, ಬದಲಿಗೆ ಚೀನಾದಲ್ಲಿ ಹುಟ್ಟಬೇಕಿತ್ತು ಎಂದು ತಿಳಿಸಿದರು.
ಜೆಡಿಎಸ್ ಎಂಎಲ್ ಸಿ ವಿಧಾನಸೌಧದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಪತ್ರದ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಸುಪ್ರೀಂ ಕೋರ್ಟ್ ಈ ಹಿಂದೆಯೇ ಪ್ರಾರ್ಥನೆಗೆ ವಿರೋಧ ಅಲ್ಲ, ಶಬ್ದಕ್ಕೆ ವಿರೋಧ ಎಂದು ಹೇಳಿದೆ. ಹೀಗಾಗಿ ಸುಪ್ರೀಂ ಕೋರ್ಟ್ ನ ಆದೇಶ ಉಲ್ಲಂಘನೆ ಆಗುತ್ತಿದೆ, ಈ ರೀತಿ ಮಾಡಿದರೆ ಕಾನೂನಿನ ಮಾಡಿದರೆ ಶ್ರೀರಾಮ ಸೇನೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಆಕ್ರೋಶಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.