ಬೆಂಗಳೂರು : ಸಿಎಂ ಬೊಮ್ಮಾಯಿಯವರ ಇಚ್ಛೆಯಂತೆ ದೀಪಾವಳಿಯ ಶುಭ ಸಂದರ್ಭದಲ್ಲಿ sc/st ಸಮುದಾಯಕ್ಕೆ ಸರ್ಕಾರದ ಅಧಿಕೃತ ರಾಜ್ಯಪತ್ರ ನೀಡುತ್ತಿದ್ದೇನೆ ಎಲ್ಲರ ಬಾಳಲ್ಲಿ ಬೆಳಕು ಮೂಡಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತನಾಡಿ, SC, ST ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ನೀಡಿದ್ದೇವೆ. ಮುಖ್ಯಮಂತ್ರಿಗಳು ಸಾಕಷ್ಟು ಸವಾಲು ಎದುರಿಸಿ ಧೈರ್ಯದಿಂದ ಈ ಕಾರ್ಯ ಮಾಡಿದ್ದಾರೆ. ಮುಂದೆ ಏನೇ ಸವಾಲು ಬಂದ್ರೂ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ವಾಲ್ಮೀಕಿಯ ಸಮುದಾಯದ ಪೀಠಾಧ್ಯಕ್ಷರಿಗೆ ರಾಜ್ಯಪತ್ರ ಕೊಟ್ಟಿದ್ದೇವೆ. ಸಮುದಾಯ ಆನಂದದಿಂದ ವಿಶೇಷ ದೀಪಾವಳಿ ಆಚರಿಸಲಿ. ಇಂದು ವನವಾಸ ಮುಗಿಸಿ ಪ್ರಭು ಶ್ರೀರಾಮ ಮರಳಿ ಮನೆಗೆ ಬಂದ ದಿನ. ವಾಲ್ಮೀಕಿ ರಾಮಾಯಣ ಬರೆದ ದಿನ ಎಂದು ಬಣ್ಣಿಸಿದ್ದಾರೆ.
ಎಲ್ಲರೂ ಹೇಳಿದರು, ಇದು ಜೇನು ಗೂಡಿಗೆ ಕಲ್ಲೆಸೆಯುವ ಕಾರ್ಯ ಎಂದು. ಆದರೂ ಸಹ ಹೆಚ್ಚಳಮಾಡುವ ನಿರ್ಧಾರದಿಂದ ಮುಖ್ಯಮಂತ್ರಿಗಳು ಹಿಂದೆ ಸರಿದಿಲ್ಲ. ಬದ್ಧತೆಯಿಂದ ನಮ್ಮ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ ಹಲವಾರು ಜನ ಸ್ವಾಮೀಜಿಗಳು ಇಲ್ಲೇ ಇನ್ನೂ ಬಹಳ ಕಾಲ ಇರಲಿ ಎಂದು ಆಶಿಸಿದ್ದಾರೆ.
ಬೊಮ್ಮಾಯಿ ಅಲ್ಲದೆ ಬೇರೆ ಯಾರಾದರೂ ಆಗಿದ್ದರೆ ಇಷ್ಟು ರಿಸ್ಕ್ ತಗೋತಿರಲಿಲ್ಲ. ಎಲ್ಲಾ ಸಮುದಾಯಗಳಿಗೂ ನ್ಯಾಯಯುತವಾಗಿ ಮಾಡುತ್ತೇವೆ ಎಂದರು.