ಮೈಸೂರು: ಮೈತ್ರಿ ವಿಚಾರದಲ್ಲಿ ಹೈ ಕಮಾಂಡ್ ನಾಯಕರ ತೀರ್ಮಾನವೇ ಅಂತಿಮ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಬದ್ದ , ಬಿಎಸ್ ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕರು, ಏಕಾಂಗಿಯಾಗಿ ಪಕ್ಷ ಕಟ್ಟಿದವರು ಎರಡು ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದವರು , ಅವರೊಂದಿಗೆ ಸದಾ ಇರ್ತೇವೆ ಎಂದು ತಿಳಿಸಿದರು.
ಮೈತ್ರಿಯ ಬಗ್ಗೆ ನನಗೆ ಮಾಹಿತಿ ಇಲ್ಲ, ಆದ್ರೆ ನಾನು ಈ ಬಾರಿಯೂ ಎರಡು ಲಕ್ಷ ಲೀಡ್ ನಲ್ಲಿ ಗೆಲ್ತೀನಿ, ನಾನು ಎರಡು ಬಾರಿ ಎಂಪಿಯಾಗಿ ಕೆಲ್ಸ ಮಾಡಿದ್ದೀನಿ , ಅಭಿವೃದ್ದಿ ನೋಡಿ ಮೈಸೂರು ಕೊಡಗು ಜನ ಮತ ಕೊಡ್ತಾರೆ, ಮುಂದಿನ ಚುನಾವಣೆಯಲ್ಲೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಇದನ್ನೂ ಓದಿ: ‘ಇಂಡಿಯಾ’ ಹೆಸರು ಮರುನಾಮಕರಣಕ್ಕೆ ಮನವಿ ಬಂದರೆ ಪರಿಗಣಿಸುತ್ತೇವೆ; ಯುಎನ್ ವಕ್ತಾರ
ಬಿಎಸ್ ವೈ ಅವರು ಏನೇ ತೀರ್ಮಾನ ಮಾಡಿದರೂ, ಪಕ್ಷದ ಒಳಿತಿಗಾಗಿ ಮಾಡಿರುತ್ತಾರೆ, ರಾಜ್ಯದ ಜನ ಕಳೆದ 40 ವರ್ಷಗಳಿಂದಲೂ ಪ್ರತಿ 5 ವರ್ಷಕೊಮ್ಮೆ ರಾಜ್ಯ ಸರ್ಕಾರ ಬದಲಿಸುತ್ತಾ ಬಂದಿದ್ದಾರೆ, ಆದ್ರೆ 2004 ರ ನಂತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಕೊಟ್ಟಿದ್ದಾರೆ. ಈ ಬಾರಿಯೂ ಬಿಜೆಪಿ ರಾಜ್ಯದಲ್ಲಿ ಅತಿಹೆಚ್ಚು ಸೀಟು ಗೆಲ್ಲುತ್ತದೆ ಎಂದು ತಿಳಿಸಿದರು.
ಮಹಿಷ ದಸರಾ ಆಚರಣೆ ವಿಚಾರವಾಗಿ ಮಾತನಾಡಿ, ಅದೆಂಗ್ ಮಾಡ್ತಾರೋ ಮಾಡಲಿ ನೋಡ್ತೀನಿ, ಯಾವ ಸರ್ಕಾರ ಬಂದರೂ ಆಚರಣೆ ಮಾಡುವಂತಿಲ್ಲ, ಬಹುಸಂಖ್ಯಾತರ ಭಾವನೆಗೆ ಧಕ್ಕೆಯಾಗುತ್ತದೆ ಎಂದು ಕಿಡಿಕಾರಿದರು.
ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ
ತಲೆ ಕೆಡಿಸಕೊಳ್ಳಲ್ಲ ಎಂದರೇ ಸುಮ್ಮನಿರಿ, ಪದೇ ಪದೇ ಯಾಕೆ ಅದೇ ವಿಚಾರ ಮಾತನಾಡುತ್ತೀರಿ, ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ, ಯಾವಾಗಲೂ ಚುನಾವಣೆ ರಾಜಕೀಯ ಮಾಡಿಕೊಂಡು ಇರ್ಬೇಡಿ ಎಂದು ಸಲಹೆ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.