ಹುಬ್ಬಳ್ಳಿ: ಇವತ್ತು ಸಂಭ್ರಮದ ದಿನ, ನಮ್ಮ ಸರ್ಕಾರ ಬಂದು ನೂರು ದಿನ ಆಗಿದೆ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ರು, ಕೆಲಸ ಮಾಡಲು ನಮಗೆ ಸಂಪೂರ್ಣ ಬಹುಮತ ಕೊಟ್ಟಿದ್ದಾರೆ , ಚುನಾವಣೆಯಲ್ಲಿ ಕೆಲ ಗ್ಯಾರಂಟಿ ಘೋಷಣೆ ಮಾಡಿದ್ವಿ , ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿ ಈಡೇರಿಸಿದ್ದೇವೆ, ಐದನೇ ಗ್ಯಾರಂಟಿ ಡಿಸೆಂಬರ್ ನಲ್ಲಿ ಚಾಲನೆ ಸಿಗಲಿದೆ, ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.
100 ದಿನಗಳಲ್ಲಿ ನಾಲ್ಕು ಗ್ಯಾರಂಟಿಗೆ ಚಾಲನೆ ಕೊಟ್ಟಿದ್ದೇವೆ, ಇವತ್ತಿನವರೆಗೂ 50 ಕೋಟಿ ಮಹಿಳೆಯರು ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ, ಇವತ್ತು ರಾಜ್ಯದ 12 ಸಾವಿರ ಸ್ಥಳಗಳಲ್ಲಿ ಕಾರ್ಯಕ್ರಮ ನಡೆದಿದೆ, ಮಹಿಳೆಯರಿಗೆ ದೊಡ್ಡ ಶಕ್ತಿ ನಮ್ಮ ಸರ್ಕಾರ ಕೊಟ್ಟಿದೆ, ಬಿಜೆಪಿ ಕಳೆದ 9 ವರ್ಷಗಳಿಂದ ಏನು ಮಾಡಿದೆ, ಅವರ ಸುಳ್ಳು ಪ್ರಶ್ನೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಮೋದಿ ಆಡಳಿತ ಮೆಚ್ಚಿದ ಶೇ.80ರಷ್ಟು ಭಾರತೀಯರು: ಸಮೀಕ್ಷೆ
ನಮ್ಮ ಗ್ಯಾರಂಟಿ ಯೋಜನೆ ಒಂದೊಂದೇ ಜಾರಿಯಾಗ್ತಾ ಇರೋದು ಬಿಜೆಪಿಗೆ ಸಹಿಸೋಕೆ ಆಗ್ತಿಲ್ಲ, ಬಿಜೆಪಿಯಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದೆ ಇರೋದು ದುರ್ದೈವ, ನಮ್ಮ ಕಾರ್ಯಕ್ರಮ ಕಣ್ಣಿಂದ ನೋಡಿ ಅಂದ್ರೆ ಅವರು ಎಕ್ಸರೇ ಗಾಜಿನಿಂದ ನೋಡ್ತಿದ್ದಾರೆ, ಚುನಾವಣೆ ಸೋಲಿನ ಬಳಿಕವೂ ಬಿಜೆಪಿಗೆ ಅರ್ಥ ಆಗ್ತಿಲ್ಲ, ರಸ್ತೆಯಲ್ಲಿ ನಿಂತು ಪ್ರಧಾನಿ ನೋಡೋಕೆ ಹೋದ್ರು, ಆದ್ರೆ ಮೋದಿ ಅವರನ್ನು ನೋಡಲೇ ಇಲ್ಲ
ಇದು ಮೋದಿ ಅವರು ಮಾಡಿದ ಕಪಾಳ ಮೋಕ್ಷ ಎಂದು ವ್ಯಂಗ್ಯವಾಡಿದರು.
ನಮ್ಮ ವಿರುದ್ಧ ಟೀಕೆ ಮಾಡೋ ನೈತಿಕತೆ ಕಳೆದುಕೊಂಡಿದ್ದಾರೆ, ಟೀಕೆ ಮಾಡೋದರಲ್ಲಿ ಯಾವುದು ಹುರುಳಿಲ್ಲ, ನಾವು ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡ್ತೀವಿ ಎಂದಿದ್ವಿ, ಇದೀಗ 100 ದಿನದಲ್ಲಿ ತನಿಖೆ ಆರಂಭಿಸಿದ್ದೇವೆ, ಕೋವಿಡ್ 40 ಪರ್ಸೆಂಟ್ ಹಗರಣ ತನಿಖೆಗೆ ಕೊಟ್ಟಿದ್ದೇವೆ, ಆಕ್ಸಿಜನ್, ಬೆಡ್ ಖರೀದಿಯಲ್ಲಿ ನೂರಾರು ಕೋಟಿ ಹಗರಣ ಆಗಿದೆ, ಹೀಗಾಗಿ ಜನ ಬಿಜೆಪಿಗೆ ಶಿಕ್ಷೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುಧಾಕರ ಭ್ರಷ್ಟಾಚಾರ ಜಗಜ್ಜಾಹೀರಾಗಿದೆ, ಸುಧಾಕರ ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೆದರಿಕೆ ? ಬರೋ ದಿನಗಳಲ್ಲಿ ಭ್ರಷ್ಟಾಚಾರ ಮಾಡಿದವರಿಗೆ ಅಗ್ನಿ ಪರೀಕ್ಷೆ ಎದುರಾಗತ್ತೆ, ತಪ್ಪು ಮಾಡಿದವರು ನೀರು ಕುಡಿಯಲೇಬೇಕು, 100 ದಿನಗಳಲ್ಲಿ ಪ್ರಾಮಾಣಿಕ ಸರ್ಕಾರ ಕೊಟ್ಟಿದ್ದೇವೆ ಎಂದು ಹೇಳಿದರು.
ಸಿಲಿಂಡರ್ ಬೆಲೆ ಯಾಕೆ ಕಡಿಮೆ ಮಾಡಿದ್ರು ಅಂದ್ತೆ ಅದಕ್ಕೆಲ್ಲ ಚುನಾವಣೆ ಕಾರಣ, ಕರ್ನಾಟಕದಲ್ಲಿ ಮೋದಿ ರ್ಯಾಲಿ ಮಾಡಿದ್ರು ಕಾಂಗ್ರೆಸ್ ಗೆ ಬಹುಮತ ಕೊಟ್ರು, ಮೋದಿ ಅವರಿಗೆ ಬೆಲೆ ಹೆಚ್ಚಳವಾಗಿದ್ದು ಇಷ್ಟು ದಿನ ಗೊತ್ತಾಗಿರಲಿಲ್ವಾ.? ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ಬರ್ತಿದೆ, ನಿಮ್ಮ ಸಮಯ ಮುಗಿದಿದೆ,ಮೋದಿ ಅವರನ್ನು ಮನೆಗೆ ಕಳಿಸ್ತಾರೆ, ಕೇಂದ್ರದಲ್ಲಿ ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬರತ್ತೆ, ಗ್ಯಾರಂಟಿ ಯೋಜನೆಗೆ ಯಾವುದೇ ಹಣದ ಕೊರತೆ ಇಲ್ಲ ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.