ಮಂಡ್ಯ : ಕಾವೇರಿ ವಿವಾದದ ವಿಚಾರಣೆ ಮುಂದೂಡಿರೋದು ಭಾರಿ ಹಿನ್ನಡೆಯಾಗಿದೆ ಎಂದು ಕೆಆರ್‌ಎಸ್‌ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ.
ಕೆಆರ್‌ಎಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೆ.11 ಕ್ಕೆ ಅರ್ಜಿ ವಿಚಾರಣೆ ಆಗಿದ್ದರೆ ಏನೋ ಸುಧಾರಣೆ ಕಾಣಬಹುದು ಅಂದುಕೊಂಡಿದ್ದೇವು, ಈಗ ಸೆ.21ಕ್ಕೆ ಮುಂದೂಡಿರೋದು ತುಂಬಾ ಆತಂಕ ತಂದಿದೆ ಎಂದು ಅಭಿಪ್ರಾಯಪಟ್ಟರು.
ರೈತರ ಪರ ಸರ್ಕಾರ ಅಂತಾ ಹೇಳುತ್ತಿರುವ ಕಾಂಗ್ರೆಸ್ ಈಗ ಗಂಭೀರ ನಿರ್ಧಾರ ಮಾಡಬೇಕು, ಗಂಭೀರ ನಿರ್ಧಾರ ತೆಗೆದುಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಅಭಿಪ್ರಾಯಪಟ್ಟರು. ಜನರು ನೀರು ಇಲ್ಲದೇ ಕಷ್ಟ ಅನುಭವಿಸಬೇಕಾಗುತ್ತದೆ, ಸರ್ಕಾರ ಬೆಳೆಗಳಿಗೆ ಪರಿಹಾರ ನೀಡುವ ಒತ್ತಡ ಸಹ ಬರುತ್ತದೆ, ಸೆ. 21ಕ್ಕೆ ಅರ್ಜಿ ವಿಚಾರಣೆ ಮಾಡ್ತಿರೋದು ದೊಡ್ಡ ಹಿನ್ನಡೆಯಾಗಿದೆ, ಈ ಬಗ್ಗೆ ಸಭೆ ನಡೆಸಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸರ್ಕಾರ ಮಾತಾಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಮಾಜಿ ಸಂಸದೆ ಹಾಗು ನಟಿ ರಮ್ಯಾ ನಿಧನ ಸುದ್ದಿ ಸುಳ್ಳು..!
ಈಗ ತಮಿಳುನಾಡಿಗೆ ಹೋಗುತ್ತಿರೋ ನೀರನ್ನು ತಡೆಯಬೇಕು, ನೀರಿನ ವಿಚಾರವಾಗಿ ಬೇಗ ಅರ್ಜಿ ವಿಚಾರಣೆ ಮಾಡಲು ಕಾನೂನಿನಲ್ಲಿ ಏನು ಅವಕಾಶ ಇದೆ ಅನ್ನೋದನ್ನು ಸರ್ಕಾರ ಗಮನಿಸಬೇಕು, ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಬೇಕು, ಅಷ್ಟೇ ಅಲ್ಲದೇ ರೈತರ ಸಮಸ್ಯೆ ಅರ್ಥೈಸಿ ನಮಗೆ ಕುಡಿಯುವ ನೀರನ್ನು ಉಳಿಸಬೇಕು, ಈ ವಿಚಾರವಾಗಿ ಸದ್ಯದಲ್ಲೇ ರೈತ ಸಂಘದ ರೂಪುರೇಷೆಯನ್ನು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.