ಕಲಬುರಗಿ : ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರ ಹೈಕಮಾಂಡ್ ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಫಲ ನೀಡುತ್ತೆ ಮೈತ್ರಿ , G20 ಬಗ್ಗೆ ಒಳ್ಳೆಯ ಸ್ಪಂದನೆ ಎಲ್ಲಾ ರಾಷ್ಟ್ರದಿಂದ ಸಿಗುತ್ತಿದೆ, ಕಾಂಗ್ರೆಸ್ ಕೇವಲ ಬಿಜೆಪಿ ಟೀಕಿಸುವ ಕೆಲಸ ಮಾಡುತ್ತಿದೆ, ಅವರಿಗೇನು ಕೆಲಸ ಇಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಮೋದಿಯವರು ಯಾರಿಗೂ ಹೆದರುವುದು ಇಲ್ಲ, ಮೋದಿ ವಿಶ್ವದ ಒಬ್ಬ ಶಕ್ತಿಶಾಲಿ ನಾಯಕ ಆಗುತ್ತಿದ್ದು, ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ , ಸನಾತನ ಧರ್ಮದ ಬಗ್ಗೆ ದಿನಕ್ಕೊಂದು ಹೇಳಿಕೆಗಳು ಬರುತ್ತಿದೆ, ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ, ಸಂವಿಧಾನ ನಮ್ಮದೇ, ನಾವೇ ಸಂವಿಧಾನ ರಕ್ಷಣೆ ಮಾಡುತ್ತಿದ್ದೇವೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ; ‘ಅನಿಷ್ಟ ಸರ್ಕಾರದ ವಿರುದ್ಧ ಹೋರಾಟ ಅವಶ್ಯಕ; ಮೈತ್ರಿ ಅನಿವಾರ್ಯ’
ಸಂವಿಧಾನ ಮತ್ತು ಸನಾತನ ಧರ್ಮಕ್ಕೆ ಒಂದು ಇತಿಹಾಸ ಇದೆ, ಜಗತ್ತಿಗೆ ವೇದ ನೀಡಿದ ಧರ್ಮ, ಸಂಸ್ಕಾರ ನೀಡಿದ ಧರ್ಮ, ಇದರ ಬಗ್ಗೆ ಲಘುವಾಗಿ ಮಾತನಾಡಬಾರದು, ಸಂವಿಧಾನ ಪ್ರಕಾರ ನಡೆಯುತ್ತೇವೆಂದು ಪ್ರಮಾಣ ಮಾಡಿ, ಹೀಗೆ ನಡೆದುಕೊಳ್ಳುತ್ತಿರುವುದು ಸರಿಯಲ್ಲ, ಮಲ್ಲಿಕಾರ್ಜುನ ಖರ್ಗೆ ಸನಾತನ ಧರ್ಮದ ಬಗ್ಗೆ ತಮ್ಮ ನಿಲುವು, ಸ್ಪಷ್ಟಪಡಿಸಲಿ ಎಂದು ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.