ಬೆಂಗಳೂರು: ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಂಜೆ ವೇಳೆಗೆ ಡಿಸೈಡ್ ಆಗುತ್ತಾ ವಿಪಕ್ಷ ನಾಯಕನ ಹೆಸರು? ಎಂಬ ಕುತೂಹಲ ಹೆಚ್ಚಾಗಿದೆ.
ದೆಹಲಿಯಿಂದ ಇಬ್ಬರು ವೀಕ್ಷಕರು ಬೆಂಗಳೂರಿಗೆ ಬರಲಿದ್ದಾರೆ ಈ ವೀಕ್ಷಕರ ಸಮ್ಮುಖದಲ್ಲೇ ವಿಪಕ್ಷ ನಾಯಕನ ಹೆಸರು ಫೈನಲ್ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಜಿಲ್ಲಾ ಪ್ರವಾಸ : ಮುನ್ನೆಚ್ಚರಿಕಾ ಕ್ರಮವಾಗಿ ರೈತರ ಬಂಧನ
ವಿಪಕ್ಷ ನಾಯಕನ ಒಂದು ಸ್ಥಾನಕ್ಕೆ ಡಜನ್ ನಾಯಕರ ಪೈಪೋಟಿ ಇದೆ. ಬಿಜೆಪಿ ಅಧ್ಯಕ್ಷ ಸ್ಥಾನ ಲಿಂಗಾಯತ ಸಮುದಾಯಕ್ಕೆ ಸಿಕ್ಕಿದ್ದಾಗಿದೆ. ಹೀಗಾಗಿ, ವಿಪಕ್ಷ ನಾಯಕ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ಸಿಗುತ್ತಾ..? ಹಿಂದುಳಿದ ವರ್ಗಕ್ಕೆ ವಿಪಕ್ಷ ನಾಯಕನ ಸ್ಥಾನ ನೀಡುತ್ತಾ ಬಿಜೆಪಿ..? ಇಂದು ಸಂಜೆ ಶಾಸಕಾಂಗ ಸಭೆಯಲ್ಲಿ ಯಾರಿಗೆ ಸಿಗುತ್ತೆ ಬೆಂಬಲ..? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತಿವೆ.
ಒಕ್ಕಲಿಗ ಕೋಟಾದಲ್ಲಿ ಮಾಜಿ ಸಚಿವರಾದ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ್ ರೇಸ್ನಲ್ಲಿದ್ದಾರೆ. ಅಲ್ಲದೆ, ಹಿಂದುಳಿದ ವರ್ಗದಿಂದ ಮಾಜಿ ಸಚಿವ ಸುನಿಲ್ ಕುಮಾರ್ ಹೆಸರು ಕೇಳಿ ಬರ್ತಿದೆ. ಲಿಂಗಾಯತ ನಾಯಕರಿಂದಲೂ ವಿಪಕ್ಷ ನಾಯಕ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದಿದೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನನಗೇ ಕೊಡುವಂತೆ ಕೇಳ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಪ್ರತಿ ತಿಂಗಳು ಚಾಮುಂಡೇಶ್ವರಿಗೂ ತಲುಪಲಿದೆ ಗೃಹಲಕ್ಷ್ಮಿ ಯೋಜನೆ ಹಣ
ನೂತನ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಇದು ಮೊದಲ ಸವಾಲಾಗಿದ್ದು, ಅತೃಪ್ತ ನಾಯಕರನ್ನು ಹೇಗೆ ಸಂಬಾಳಿಸ್ತಾರೆ? ಎಲ್ಲವನ್ನೂ ಯಾವ ರೀತಿ ಚಾಲೆಂಜ್ ಆಗಿ ತೆಗೆದುಕೊಳ್ತಾರೆ ಅಂತ ಕಾದು ನೋಡಬೇಕಾಗಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.