Sunday, October 1, 2023
spot_img
- Advertisement -spot_img

G20 ಆಮಂತ್ರಣದಲ್ಲಿ ‘ಪ್ರೆಸಿಡೆಂಟ್‌ ಆಫ್‌ ಭಾರತ್‌’: ವಿಪಕ್ಷಗಳಿಂದ ವಿರೋಧ

ನವದೆಹಲಿ: ದೇಶದಲ್ಲಿ ʼಇಂಡಿಯಾʼ ಹೆಸರನ್ನು ʼಭಾರತ್‌ʼ ಎಂದು ಮರುನಾಮಕರಣ ಮಾಡವು ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಜಿ–20 ಶೃಂಗ ಸಭೆಯಲ್ಲಿ ಭಾಗಿಯಾಗುವ ನಾಯಕರ ಔತಣಕೂಟಕ್ಕೆ ರಾಷ್ಟ್ರಪತಿ ನೀಡಿರುವ ಆಮಂತ್ರಣವು ವಿವಾದ ಸೃಷ್ಟಿಸಿದೆ.

ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್‌ ಆಫ್ ಇಂಡಿಯಾ’ ಬದಲು ’ಪ್ರೆಸಿಡೆಂಟ್‌ ಆಫ್ ಭಾರತ್‌’ ಎನ್ನುವ ಹೆಸರು ಮುದ್ರಿಸಲಾಗಿದೆ. ಇದಕ್ಕೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.

ವಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿರುವುದಕ್ಕೆ ಕೇಂದ್ರ ಸರ್ಕಾರವು ಭಯಭೀತಗೊಂಡಿದೆ. ಇಂಡಿಯಾವನ್ನು ನಮ್ಮ ಹೃದಯಗಳಿಂದ ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಇಂಡಿಯಾ ಒಕ್ಕೂಟದ ನಾಯಕರು ಟಾಂಗ್‌ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಒಂದು ವೇಳೆ ಇಂಡಿಯಾ ಒಕ್ಕೂಟವೂ ಭಾರತ್‌ ಎಂದು ಮರುನಾಮಕರಣ ಮಾಡಿದರೆ, ಕೇಂದ್ರ ಸರ್ಕಾರವೂ ಹಾಗೇ ಮಾಡುತ್ತಾ? ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ವಿನಾಶಕಾರಿ ತಲೆಗಳು ಮಾತ್ರ ಜನರನ್ನು ಹೇಗೆ ವಿಭಜನೆ ಮಾಡಬೇಕೆಂದು ಯೋಚಿಸಲು ಸಾಧ್ಯ. ಅವರು ಮತ್ತೊಮ್ಮೆ ಭಾರತೀಯರು ಹಾಗೂ ಇಂಡಿಯನ್ಸ್‌ ನಡುವೆ ಬಿರುಕು ಮೂಡಿಸುತ್ತಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್‌, ‘ಮೋದಿಯವರು ಇತಿಹಾಸವನ್ನು ತಿರುಚಬಹುದು. ಭಾರತವನ್ನು ವಿಭಜಿಸಬಹುದು. ಭಾರತ ರಾಜ್ಯಗಳ ಒಕ್ಕೂಟ, ಭಾರತ ಒಂದಾಗಲಿದೆ. ಇಂಡಿಯಾ ಗೆಲ್ಲಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಫ್ಲ್ಯಾಟ್‌ ಹೆಸರಲ್ಲಿ ವಂಚನೆ ಕೇಸ್‌; ಸಂಸದೆ ನುಸ್ರತ್‌ಗೆ ಸಮನ್ಸ್‌

ಆಮ್‌ ಆದ್ಮಿ ಪಕ್ಷದ ಸಂಸದ ರಾಘವ ಚಡ್ಡಾ,‘ಬಿಜೆಪಿ INDIAವನ್ನು ಅಳಿಸಿ ಹಾಕಲು ಹೇಗೆ ಸಾಧ್ಯ? ದೇಶ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾದುದ್ದಲ್ಲ, ದೇಶ 135 ಕೋಟಿ ಭಾರತೀಯರದ್ದು. ಭಾರತ ಒಂದಾಗಲಿದೆ. ಇಂಡಿಯಾ ಗೆಲ್ಲಲಿದೆ’ ಎಂದಿದ್ದಾರೆ.

ಕಾಂಗ್ರೆಸ್‌ ಸಂಸದ ಶಶಿ ತರೂರ್‌, ಅಧಿಕೃತ ಹೆಸರುಗಳಲ್ಲಿ ಒಂದಾಗಿರುವ ಭಾರತ್ ಎಂದು ಕರೆಯಲು ಯಾವುದೇ ಸಂವಿಧಾನಿಕ ವಿರೋಧಗಳಿಲ್ಲ. ಆದರೆ ಶತಮಾನಗಳಿಂದ ನಿರ್ಮಿಸಲಾದ ಬ್ರಾಂಡ್ ಮೌಲ್ಯ ಹೊಂದಿರುವ ಇಂಡಿಯಾವನ್ನು ಸಂಪೂರ್ಣವಾಗಿ ತ್ಯಜಿಸುವಷ್ಟು ಮೂರ್ಖತನ ಸರ್ಕಾರ ಪ್ರದರ್ಶಿಸುವುದಿಲ್ಲ ಎನ್ನುವ ಭರವಸೆ ನನಗಿದೆ ಇದೆ’ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles