ಬೆಳಗಾವಿ : ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು ಅಂತಾ ರಾಜಣ್ಣ ಅವರ ಅಭಿಪ್ರಾಯ ಹೇಳಿದ್ದಾರೆ, ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು. ಈಗಂತೂ ಅದರ ಚರ್ಚೆ ಅವಶ್ಯಕತೆ ಇಲ್ಲ, ರಾಜಣ್ಣ ಅವರು ಹೇಳಿದ ಮೇಲೆ ಚರ್ಚೆ ಪ್ರಾರಂಭ ಆಗಬಹುದು, ಅವಶ್ಯಕತೆ ಇದೆಯೋ ಇಲ್ಲವೋ ಪಕ್ಷ ತೀರ್ಮಾನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಾನಂತೂ ಡಿಸಿಎಂ ಆಕಾಂಕ್ಷಿ ಅಲ್ಲ, ಒಂದು ವೇಳೆ ಪಕ್ಷ ಮಾಡೋದಾದ್ರೆ ಯಾರನ್ನು ಮಾಡುತ್ತೋ ಅವರ ಸಾಮರ್ಥ್ಯ ನೋಡಿ ಡಿಸಿಎಂ ಮಾಡುತ್ತೆ, ಡಿಸಿಎಂ ಬೇಕು ಅಂತ ಬಹಳಷ್ಟು ಜನ ಹೇಳಿದ್ದಾರೆ. ನೋಡಬೇಕು ಏನಾಗುತ್ತೆ ಅಂತಾ ತಿಳಿಸಿದರು.
ಸಿದ್ದರಾಮಯ್ಯ, ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಬಿಜೆಪಿ ಸೇರುವ ಕುರಿತು ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಸಿಎಂ ಹೇಳಿದ್ದಾರೆ, ಎಲ್ಲರೂ ಹೇಳಿಕೆ ಕೊಡುವುದು ಸರಿಯಲ್ಲ, 2008 ರಲ್ಲಿ ನಡೆದ ವಿಚಾರದ ಕುರಿತು ಆ ರೀತಿಯ ಚರ್ಚೆ ನಡೆದಿತ್ತಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯದಲ್ಲಿ ಎಲ್ಲಾ ರೀತಿಯ ಚರ್ಚೆ ಆಗುತ್ತವೆ, ನಾಲ್ಕು ಗೋಡೆಗಳ ಮಧ್ಯೆ ಬೇರೆ ಇರುತ್ತೆ ಹೊರಗಡೆ ಬೇರೆ ಇರುತ್ತೆ. ಚರ್ಚೆಗಳು ಆಗಿದ್ದನ್ನೆಲ್ಲಾ ನೀವು ಕ್ಯಾಚ್ ಹಿಡಿದ್ರೆ ಹೇಗೆ? ಒಂದೊಂದು ಸಲ ಅಂಗಡಿಗೆ ಹೋಗಿ ಬಟ್ಟೆ ಸರಿ ಇದೆಯೋ ಇಲ್ವೊ ನೋಡ್ತೇವೆ, ಬಟ್ಟೆ ಸರಿ ಇಲ್ಲ ಎಂದರೆ ಬೇರೆ ಅಂಗಡಿಗೆ ಹೋಗ್ತೇವೆ ಎಂದು ಪಕ್ಷವನ್ನು ಬಟ್ಟೆ ಅಂಗಡಿಗೆ ಹೋಲಿಸಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಪಾದಯಾತ್ರೆ ಮಾಡುವ ಬಗ್ಗೆ ಮಾತನಾಡಿದ ಅವರು, ನಮಗೆ ಡಬಲ್ ಬೆನಿಫಿಟ್ ಆಗುತ್ತೆ, ಇಂತಹ ಕಷ್ಟ ಕಾಲದಲ್ಲೂ ಸಹ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಜನರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದಂತೆ ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ; ಫ್ರೀ ಕರೆಂಟು, ₹500ಕ್ಕೆ LPG, ಮಹಾಲಕ್ಷ್ಮಿಗೆ ₹2,500…
ಬೆಳಗಾವಿ, ಖಾನಾಪುರ ತಾಲೂಕುಗಳನ್ನ ಬರ ಪಟ್ಟಿಯಿಂದ ಕೈ ಬಿಟ್ಟ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅದು ನಮ್ಮ ಕೈಯಲಿಲ್ಲ ಕೇಂದ್ರ ಸರ್ಕಾರದ ಮಾನದಂಡ ಇದೆ, ಅವರ ಫಾರ್ಮ್ಯಾಟ್ ಇದೆ ಅದರ ಪ್ರಕಾರ ಆಗಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.