ಬೆಂಗಳೂರು: ಕಾಂಗ್ರೆಸ್ ನವರು ಭಾರಿ ಬುದ್ಧಿವಂತರು, ರಾಜ್ಯದಲ್ಲಿ ಬರದ ವಿಷಯಗಳನ್ನು ಡೈವರ್ಟ್ ಮಾಡಲು ಡಿಸಿಎಂ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ರವಿಕುಮಾರ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದ ದಿನ ಕಾಂಗ್ರೆಸ್ ಗೆ ಒಂದು ಸವಾಲು ಹಾಕ್ತೇನೆ, ತಾಕತ್ ಇದ್ರೆ 3 ಜನರನ್ನು ಉಪ ಮುಖ್ಯಮಂತ್ರಿ ಮಾಡಲಿ, ನಮ್ಮ ಸರ್ಕಾರದಲ್ಲಿ ಮೂವರನ್ನು ಡಿಸಿಎಂ ಮಾಡಿದ್ವಿ, ಆದರೆ ಸಿದ್ದರಾಮಯ್ಯ ದಲಿತ ವಿರೋಧಿ, ದಲಿತರನ್ನು ಉಪಮುಖ್ಯಮಂತ್ರಿ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಬೇರೆಯವರ ಬೆಳವಣಿಗೆ ಕಾಂಗ್ರೆಸ್ ಸಹಿಸಲ್ಲ, ರಾಜ್ಯದಲ್ಲಿ ವಿಪರೀತ ಬರ ಇದೆ, ಮಳೆ ಇಲ್ಲ, ಕುಡಿಯಲು ನೀರಿಲ್ಲ, ಕಾವೇರಿ ಬರಿದಾಗಿದೆ, ನಮ್ಮ ಸಿಎಂ, ತಮಿಳುನಾಡಿನ ಮುಖ್ಯಮಂತ್ರಿಯಂತೆ ಮಾತನಾಡುತ್ತಾರೆ, ಕಾವೇರಿ ನೀರು ತಮಿಳುನಾಡಿಗೆ ಹರಿಸಿದ್ದಾರೆ ಅಂದರೆ ಇವರು ತಮಿಳುನಾಡಿನ ಸಿಎಂ ರೀತಿಯಲ್ಲಿ ವರ್ತನೆ ಮಾಡುತ್ತಾರೆ ಎಂದು ಹರಿಹಾಯ್ದರು.
ನಮ್ಮಲ್ಲಿ ಮಳೆ ಇಲ್ಲ ಅಂತಿದ್ದಾರೆ, ಹಾಗಾದರೆ ತಮಿಳುನಾಡಿಗೆ ಕೊಡಲು ನೀರು ಇದ್ಯಾ..? ಕೇಂದ್ರ ಸರ್ಕಾರದ ರೂಲ್ಸ್ ಬದಲಾವಣೆ ಮಾಡಲು ಬೇಡಿಕೆ ಇಟ್ಟಿದ್ದಾರೆ, ರೈತರಿಗೆ ಒಂದು ಲಕ್ಷ ರೂಪಾಯಿ ಯಡಿಯೂರಪ್ಪ ಕೊಡುತ್ತಿದ್ದರು, ನೀವು ಐದು ಲಕ್ಷ ರೂಪಾಯಿ ಕೊಡಿ, ಕೂಡಲೇ ಬೆಳೆ ಪರಿಹಾರ ಕೊಡಿ ಕಾವೇರಿ ಹಾಗೂ ಬರ ವಿಚಾರ ಚರ್ಚೆ ಗೆ ಬರಬಾರದು ಎಂದು ಬೇರೆ ವಿಚಾರ ಚರ್ಚೆ ಹುಟ್ಟು ಹಾಕಿದ್ದಾರೆ, ರಾಜಣ್ಣ ಮೂರು ಡಿಸಿಎಂ ಚರ್ಚೆ ಮಾಡ್ತಿದ್ದಾರೆ ಎಂದು ಆಕ್ರೋಶಿಸಿದರು.
ಇದನ್ನೂ ಓದಿ: ಹಳೆ ಸಂಸತ್ ಭವನದಲ್ಲಿ ಕೊನೆಯ ಕಲಾಪ ಅಂತ್ಯ; ನಾಳೆಯಿಂದ ಹೊಸ ಕಟ್ಟಡದಲ್ಲಿ ಅಧಿವೇಶನ
ಯಡಿಯೂರಪ್ಪ ಪ್ರವಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎರಡು ದಿನಗಳಲ್ಲಿ ಹೇಳ್ತೀವಿ ನಾಳೆ ಸಭೆಗೆ ಹೋಗ್ತೇವೆ, ರಾಜ್ಯಾಧ್ಯಕ್ಷರು ಸೇರಿ ಅನೇಕ ನಾಯಕರು ಈ ಪ್ರವಾಸದಲ್ಲಿರ್ತಾರೆ, ಕಾವೇರಿ ವಿಚಾರ ಇಟ್ಟುಕೊಂಡು – ಈ ಭಾಗದಲ್ಲೇ ಶುರು ಮಾಡಬೇಕು ಅಂತ ಅಂದುಕೊಂಡಿದ್ದೇವೆ, ಎಲ್ಲರೂ ಒಟ್ಟಾಗಿ ಪ್ರವಾಸ ಮಾಡ್ತೀವಿ, ತಂಡದಲ್ಲಿ 10 -15 ಹಿರಿಯ ನಾಯಕರು ಇರ್ತಾರೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.