Wednesday, November 29, 2023
spot_img
- Advertisement -spot_img

ಕೊನೆಯ ದಿನದವರೆಗೂ ಪ್ರಧಾನಿ ಮೋದಿ ಆಡಳಿತ ನಡೆಸ್ತಾರೆ; ಅನುರಾಗ್ ಠಾಕೂರ್

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯು ಅವಧಿ ಮುನ್ನ ಅಥವಾ ತಡವಾಗಿಯೂ ನಡೆಯುವುದಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ನರೇಂದ್ರ ಮೋದಿ ಅವರು ತಮ್ಮ ಅಧಿಕಾರವಧಿಯ ಕೊನೆಯ ದಿನವನ್ನೂ ಕಳೆಯಲಿದ್ದಾರೆ ಎಂದಿದ್ದಾರೆ.

ದೇಶದಲ್ಲಿ ಲೋಕಸಭೆ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಬೇಕಿದೆ. ಅವಧಿ ಮುನ್ನ ಅಥವಾ ತಡವಾಗಿ ಚುನಾವಣೆ ನಡೆಸುವ ಯಾವುದೇ ಆಲೋಚನೆಯಿಲ್ಲ. ಪ್ರಧಾನಿ ಮೋದಿ ತಮ್ಮ ಆಡಳಿತ ಅವಧಿಯ ಕೊನೆಯ ದಿನದ ವರೆಗೂ ಜನೆತೆಯ ಸೇವೆ ಮಾಡಲು ಇಷ್ಟಪಡುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ವೋಟ್‌ಗಾಗಿ ಸನಾತನ ಧರ್ಮದ ನಿಂದನೆ: ಅಮಿತ್‌ ಶಾ ಕಿಡಿ

ಸರ್ಕಾರವು ಒಂದು ರಾಷ್ಟ್ರ, ಒಂದು ಚುನಾವಣೆಯ ಕುರಿತ ಚರ್ಚೆಗಾಗಿ ಸಮಿತಿಯನ್ನು ರಚಿಸಿದೆ. ಈ ಕುರಿತ ಮಾನದಂಡಗಳನ್ನು ಅಂತಿಮಗೊಳಿಸುವ ಸಲುವಾಗಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಸೆಪ್ಟೆಂಬರ್ 18 ರಂದು ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಪ್ರಮುಖ ನಿರ್ಧಾರಗಳ ಬಗ್ಗೆ ಚರ್ಚೆಗೆ ನಿರ್ಧರಿಸಿದೆ ಎಂದಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆಯಿಂದ ದೇಶಕ್ಕೆ ಅನುಕೂಲವಾಗಲಿದೆ. ಸಮಯ, ಹಣ ಎಲ್ಲವೂ ಉಳಿತಾಯವಾಗಲಿದೆ. ಆದರೆ ಯಾವ ಕಾರಣಕ್ಕೆ ವಿಪಕ್ಷಗಳು ಇದನ್ನು ವಿರೋಧಿಸುತ್ತಿವೆ ಎಂಬುದು ಗೊತ್ತಾಗುತ್ತಿಲ್ಲ. ಇದರಿಂದ ಅವರಿಗೇನು ನಷ್ಟವಿಲ್ಲ, ಇದರಲ್ಲಿ ಲೋಪದೋಷವಿದ್ದ ಕೇಂದ್ರ ಈ ಬಗ್ಗೆ ಚರ್ಚೆಗೆ ಮುಕ್ತವಾಗಿದೆ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles