ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಖಾಸಗಿ ಬಸ್‌ಗಳಿಗೂ ವಿಸ್ತರಣೆ, ರಸ್ತೆ ತೆರಿಗೆ ಸಂಪೂರ್ಣ ರದ್ದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಳೆ ರಾಜಧಾನಿ ಬೆಂಗಳೂರಿನಲ್ಲಿ ಸಾರಿಗೆ ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳು ಸಮರ ಸಾರಿದ್ದು, ಬೆಂಗಳೂರು ನಗರದ ಎಲ್ಲಾ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಗಳ ಮಾಲೀಕರು ಬಂದ್ ಗೆ ಬೆಂಬಲ ನೀಡಿದ್ದಾರೆ.
ಈ ಸಂಬಂಧ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸಾರಿಗೆ ಇಲಾಖೆ ಅಧಿಕಾರಿಗಳು ಗುರುವಾರ ನಡೆಸಿದ ಸಭೆ ವಿಫಲವಾಗಿದೆ.
ಇದನ್ನೂ ಓದಿ : Karnataka BJP : ವಿಪಕ್ಷ ನಾಯಕನ ನೇಮಿಸದ ಬಿಜೆಪಿ: ನಡ್ಡಾ, ಕಟೀಲ್, ಮುಖ್ಯ ಕಾರ್ಯದರ್ಶಿಗೆ ಲೀಗಲ್ ನೋಟಿಸ್
ಬಂದ್ ದಿನ ಹೇಗಿರುತ್ತೆ?
- ನಗರದೊಳಗೆ ಬೃಹತ್ ಮೆರವಣಿಗೆ- ಫ್ರೀಡಂ ಪಾರ್ಕ್ ನಲ್ಲಿ ಶಕ್ತಿ ಪ್ರದರ್ಶನ
- ಭಾನುವಾರ ಮಧ್ಯ ರಾತ್ರಿಯಿಂದಲೇ ಸ್ತಬ್ಧವಾಗಲಿದೆ ಖಾಸಗಿ ಸಾರಿಗೆ- ಸೋಮವಾರ ಮಧ್ಯರಾತ್ರಿವರೆಗೂ ಅದೇ ಪರಿಸ್ಥಿತಿ ಕಾಪಾಡಲು ಮನವಿ
- ಏರ್ಪೋರ್ಟ್ ಟ್ಯಾಕ್ಸಿ ಸಿಗೋದೂ ಡೌಟ್
- ಸರ್ಕಾರಿ ಸಾರಿಗೆಗಳು ಲಭ್ಯ ಇರಲಿದ
- ಖಾಸಗಿ ವಾಹನಗಳ ಮೂಲಕ ಶಾಲೆಗೆ ಮಕ್ಕಳನ್ನು ಕಳಿಸುವವರಿಗೂ ಎಫೆಕ್ಟ್ ತಟ್ಟಬಹುದು
- 3 ಲಕ್ಷ ಆಟೋ, 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನ, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನ ಸೇರಿದಂತೆ ಕಾರ್ಪೊರೇಟ್ ಕಂಪನಿಗಳ ಬಸ್ ಹಾಗೂ 80 ಸಾವಿರ ಸಿಟಿ ಬಸ್ ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ವಾಹನಗಳ ಸ್ತಬ್ಧ ಸಾಧ್ಯತೆ.
ಇದನ್ನೂ ಓದಿ : ರಾಜ್ಯ ರಾಜಧಾನಿಯಲ್ಲಿ ಇಂದು ಜೆಡಿಎಸ್ ಸಮಾವೇಶ
ಸಾರಿಗೆ ಇಲಾಖೆ ಅಧಿಕಾರಿಗಳು ಒಕ್ಕೂಟದ ಪದಾಧಿಕಾರಿಗಳ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಪಟ್ಟು ಸಡಿಲಿಸದ ಸಾರಿಗೆ ಒಕ್ಕೂಟದ ಮುಖಂಡರು, ಯಾವುದೇ ಕಾರಣಕ್ಕೂ ಮುಷ್ಕರ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಒಕ್ಕೂಟವು ಮುಂದಿಟ್ಟಿದ್ದ 30 ಬೇಡಿಕೆಗಳ ಪೈಕಿ 28 ಬೇಡಿಕೆಗಳನ್ನು ಈಡೇರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದರು. ಅದರಂತೆ ಜು. 27ಕ್ಕೆ ಕರೆ ನೀಡಿದ್ದ ಬಂದ್ ಹಿಂಪಡೆಯಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.