Friday, September 29, 2023
spot_img
- Advertisement -spot_img

ಚುನಾವಣೆ ಮುನ್ನ ಪಕ್ಷಭೇದ, ಬಳಿಕ ನಾವೆಲ್ಲ ಒಂದೇ : ದರ್ಶನಾಪುರ

ಯಾದಗಿರಿ : ಸರ್ಕಾರದ ಕಚೇರಿ ಇದ್ದರೆ ಯಾವುದೇ ಪಕ್ಷಕ್ಕೆ ಸಿಮಿತವಲ್ಲ. ಈ ಕಾರ್ಯಾಲಯ ಗುರುಮಠಕಲ್ ಕ್ಷೇತ್ರದ ಜನರ ಕಚೇರಿಯಾಗಿದೆ. ಒಂದು ಪಕ್ಷದ ಕಚೇರಿ ಅಲ್ಲ, ಇದು ಶಾಸಕರ ಕಚೇರಿ. ಚುನಾವಣೆ ಆಗುವವರೆಗೆ ಪಕ್ಷಭೇದ ಮಾಡಲಿ, ಚುನಾವಣೆ ಬಳಿಕ ನಾವೆಲ್ಲ ಶಾಸಕರು, ಒಂದಾಗಿ ಕೆಲಸ ಮಾಡುತ್ತೆವೆ. ಜಿಲ್ಲೆಯ ಜನರ ಹಿತ ದೃಷ್ಟಿಯಿಂದ ನಾಲ್ಕು ಜನ ಶಾಸಕರು ಸೇರಿ ಅಭಿವೃದ್ಧಿ ಕೆಲಸ ಮಾಡುತ್ತೆವೆ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದಲ್ಲಿಂದು ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಕಚೇರಿಯನ್ನು ಉದ್ಘಾಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುನ್ನ ಪಕ್ಷಗಳು ಇರುತ್ತವೆ. ಚುನಾಯಿತರಾದ ಬಳಿಕ ಪಕ್ಷಭೇದ ಮರೆತು ಒಂದಾಗಿ ಕೆಲಸ ಮಾಡಬೇಕು. ಬಿಜೆಪಿ- ಜೆಡಿಎಸ್ ನ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಮಗೆ ಟಾಸ್ಕ್ ಕೊಟ್ಟಿಲ್ಲ, ನಾವು ಆ ತಂಟೆಗೆ ಹೋಗುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ : Nehru to Modi : ಹಳೆಯ ಸಂಸತ್ ಭವನದ ನೆನಪುಗಳನ್ನು ಮೆಲುಕು ಹಾಕಿದ ಪ್ರಧಾನಿ

ಯಾವ ಪಕ್ಷದಲ್ಲಿದ್ದರೂ ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಮಾಡುತ್ತೇವೆ ಎಂದರು.

ಅವರು ಕರೆದಲ್ಲಿ ನಾನು ಹೋಗುತ್ತೆನೆ ನಾನು ಕರೆದರೆ ಅವರು ಬರುತ್ತಾರೆ :

ಜಿಲ್ಲಾ ಮಂತ್ರಿಗಳು, ಹಾಗೂ ಕಾಂಗ್ರೆಸ್ ಶಾಸಕರಿಗೆ ಕಚೇರಿ ಉದ್ಘಾಟನೆ ಮಾಡಲು ಮನವಿ ಮಾಡಿದ್ದೆ. ಇದು ಸರ್ಕಾರದ ಕಚೇರಿಯಾಗಿದ್ದು ಹೀಗಾಗಿ ಸಚಿವರು, ಶಾಸಕರು ಬಂದಿದ್ದಾರೆ. ಪಕ್ಷಾತೀತವಾಗಿ ಬಂದು ಕಚೇರಿ ಉದ್ಘಾಟಿಸಿ ಶುಭ ಹಾರೈಸಿದ್ದಾರೆ ಎಂದು ಕಚೇರಿಯ ಉದ್ಘಾಟನೆಯ ಬಳಿಕ ಶಾಸಕ ಶರಣಗೌಡ ಕಂದಕೂರ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಯ ನಾಲ್ಕು ಜನ ಶಾಸಕರು ಒಗ್ಗಟ್ಟಾಗಿ ಕೆಲಸ ಮಾಡುತ್ತೆವೆ. ಚುನಾವಣೆಯಲ್ಲಿ ಪಕ್ಷಭೇದ ಮಾಡುತ್ತೇವೆ, ಚುನಾವಣೆ ಇಲ್ಲದಿದ್ದಾಗ ಒಗ್ಗಟ್ಟಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೆವೆ. ಅವರು ಕರೆದಲ್ಲಿ ನಾನು ಹೋಗುತ್ತೆನೆ ನಾನು ಕರೆದರೆ ಅವರು ಬರುತ್ತಾರೆ. ಜಿಲ್ಲೆಯಲ್ಲಿರುವ ಮೂರು ಜನ ಕಾಂಗ್ರೆಸ್ ಶಾಸಕರು ಹಿರಿಯರಿದ್ದಾರೆ. ಅವರ ಅನುಭವ,ಮಾರ್ಗದರ್ಶನದೊಂದಿಗೆ ಕೆಲಸ ಮಾಡಿಕೊಂಡು ಹೋಗುತ್ತೆನೆ ಎಂದು ಶಾಸಕ ಶರಣಗೌಡ ಹೇಳಿದ್ದಾರೆ.

ಇದನ್ನೂ ಓದಿ : ‘ಕೆ.ಎನ್. ರಾಜಣ್ಣನಿಗೆ ಹೈಕಮಾಂಡ್, ಸಿಎಂ ಉತ್ತರ ಕೊಡ್ತಾರೆ’

ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷದ ಒಳಗಡೆ ಭಿನ್ನಾಭಿಪ್ರಾಯಗಳಾದಾಗ ಸಹಜವಾಗಿ ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಪಕ್ಷ ಬಿಡುವುದು, ಸೇರುವುದು ಸದ್ಯಕ್ಕೆ ಅಪ್ರಸ್ತುತವಾಗಿದೆ. ನಮಗೆ ಕಾಂಗ್ರೆಸ್ ನವರು ಯಾರು ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ಆಹ್ವಾನ ಬಂದಾಗ ತಿಳಿಸುತ್ತೇನೆ, ನನಗಂತೂ ಯಾವ ಮಂತ್ರಿ, ಮುಖಂಡರು ಬಾ ಅಂತ ಕರೆದು ಮಾತನಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸರಕಾರ ಶಾಶ್ವತವಾಗಿ ಅಧಿಕಾರದಲ್ಲಿರುತ್ತಾ..? 5 ವರ್ಷ ಅಧಿಕಾರದಲ್ಲಿ ಇರುತ್ತದೆ. ಕಳೆದ ಸಲ ಅತಂತ್ರ ಸ್ಥಿತಿ ಇತ್ತು, ಹೀಗಾಗಿ ಆಪರೇಷನ್ ಗಳಾದವು ಕಾಂಗ್ರೆಸ್ ಈಗ ಸ್ಪಷ್ಟ 135 ಶಾಸಕರ ಬೆಂಬಲದ ಸರ್ಕಾರ ವಿದೆ ಎಂದು ಶಾಸಕ ಕಂದಕೂರ ಕಾಂಗ್ರೆಸ್ ಸೇರುವುದನ್ನು ಅಲ್ಲಗಳೆದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles