Friday, September 29, 2023
spot_img
- Advertisement -spot_img

ಕೈ ಶಾಸಕ, ಬಿಜೆಪಿ ಸಂಸದರ ನಡುವೆ ಸಕ್ಕರೆ ಕಾರ್ಖಾನೆಯ ಹಗ್ಗ ಜಗ್ಗಾಟ

ವಿಜಯನಗರ : ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭದ ವಿಚಾರದಲ್ಲಿ ಸಂಸದರ ಹಾಗೂ ಶಾಸಕರ ಮಧ್ಯೆ ವಾರ್ ಶುರುವಾಗಿದೆ, ಸ್ಥಳೀಯ ಕಾಂಗ್ರೆಸ್ ಶಾಸಕರು ಹಾಗೂ ದಾವಣಗೆರೆ ಬಿಜೆಪಿ ಸಂಸದರ ಜಿ.ಎಂ ಸಿದ್ದೇಶ್ವರ ಮಧ್ಯೆ ಮಾತಿನ ಸಮರ ಜೋರಾಗಿದೆ.

ಹೊಸಪೇಟೆ ಕಾಂಗ್ರೆಸ್ ಶಾಸಕ ಮತ್ತು ದಾವಣಗೆರೆ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ ಮಧ್ಯೆ ಹಂಪಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರಿ ಜಾಗದ ವಿಷಯದಲ್ಲಿ ವಾಗ್ಯುದ್ಧ ನಡೆದಿದೆ.

ಇದನ್ನೂ ಓದಿ : BREAKING NEWS-ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್!

ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಹೊಸಪೇಟೆ ಶಾಸಕ ಗವಿಯಪ್ಪ ಹೇಳಿದ್ದಾರೆ. ವಾರದ ಹಿಂದೆ ಶಾಸಕರ ವಿರುದ್ಧ ಗುಡುಗಿದ್ದ ಜಿ.ಎಂ ಸಿದ್ದೇಶ್ವರ್. ನಿನ್ನೆ ಇದೆ ವಿಚಾರವಾಗಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಶಾಸಕರ ಬಳಿ ಮಾಧ್ಯಮಗಳು ಪ್ರಸ್ತಾಪಿಸಿದಾಗ ಸಿದ್ದೇಶ್ವರ್ ವಿರುದ್ಧ ಮಾತಿನ ಬಾಣ ಬಿಟ್ಟಿದ್ದಾರೆ.

ಸಾಹುಕರಾರರನ್ನೇ, ಸಾಹುಕಾರರನ್ನಾಗಿಸಲು ನಾವು ಅಧಿಕಾರಕ್ಕೆ ಬಂದಿಲ್ಲ, ಬಡವರನ್ನ ಸಾಹುಕಾರರನ್ನಾಗಿಸಲು ಬಂದಿದ್ದೇವೆ. ಜಂಬೂನಾಥ ಏರಿಯಾದ 84 ಎಕರೆ ಜಮೀನು 200 ಕೋಟಿ ಬೆಲೆ ಬಾಳುತ್ತದೆ, ಅದನ್ನು ಕೇವಲ 14 ಕೋಟಿಗೆ ಕೋಡೋದಕ್ಕೆ ಆಗುತ್ತಾ..? ಎಂದು ಗರಂ ಆಗಿದ್ದಾರೆ.

ಸಂಸದ ಸಿದ್ದೇಶ್ವರ ಏನೇ ಹೇಳಿದ್ರೂ ನಾನು ಕಾರ್ಖಾನೆಗೆ ಅವಕಾಶ ಕೊಡುವುದಿಲ್ಲ. 7 ಸಾವಿರ ರೈತ ಕುಟುಂಬಗಳು ಎತ್ತಿನ ಬಂಡಿ ನಂಬಿಕೊಂಡು ಜೀವನ ಮಾಡುತ್ತಿವೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಆದರೆ ರೈತರ ಬಾಳು ಹಸನಾಗುತ್ತದಾ? ಎಂದು ದಾವಣಗೆರೆ ಸಂಸದರ ವಿರುದ್ಧ ಶಾಸಕ ಗವಿಯಪ್ಪ ಕಿಡಿ ಕಾರಿದ್ದಾರೆ.

ಆದರೆ 84 ಎಕರೆ ಜಮೀನು ಸಕ್ಕರೆ ಕಾರ್ಖಾನೆಗಾಗಿ ಮೀಸಲಿರಿದ್ದ ಮಾಜಿ ಸಚಿವ ಆನಂದ್ ಸಿಂಗ್, ಆ ಜಾಗದಲ್ಲಿ ಬಡವರಿಗೆ ಮನೆ ನಿರ್ಮಿಸಬೇಕೆಂಬ ಯೋಚನೆ ಜಿಲ್ಲಾಧಿಕಾರಿಯವರಿಗಿದ್ದು, ಈ ವಿಚಾರವಾಗಿಯೇ ಅವರಿಗೆ ಪತ್ರ ಬರೆದು ಗವಿಯಪ್ಪ ಆಗ್ರಹಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles