ದೊಡ್ಡಬಳ್ಳಾಪುರ: ಕಳೆದ ಬಾರಿ ನಾವು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಯಾವ ರೀತಿ ಪರಿಣಾಮ ಬೀರಿದೆ ಅಂತ ಗೊತ್ತಿದೆ ಎಂದು ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಳೆ ಕುಮಾರಣ್ಣ ಜೊತೆಗೆ ಮಹತ್ವದ ಸಭೆ ಇದೆ , ಬಿಜೆಪಿ -ಜೆಡಿಎಸ್ ಮೈತ್ರಿ ವಿಚಾರವಾಗಿ ಕಾರ್ಯಕರ್ತರ ಅಭಿಪ್ರಾಯವನ್ನು ತಿಳಿದುಕೊಳ್ಳಲಿದ್ದಾರೆ ಎಂದರು.
ಈ ಬಾರಿ ಬಿಜೆಪಿ ಜೊತೆ ವರಿಷ್ಠರು ತೀರ್ಮಾನ ಮಾಡಿದ್ದಾರೆ, ಈ ಬಾರಿ ಒಂದು ಸೂಕ್ತ ತೀರ್ಮಾನ ಮಾಡಿ ಕಾರ್ಯಕರ್ತರಿಗೆ ಒಂದು ಸಂದೇಶ ಕೊಡ್ತಾರೆ, ಅವರ ತೀರ್ಮಾನಕ್ಕೆ ನಾವು ಬದ್ಧರಾಗಿ ಪಕ್ಷಕ್ಕೆ ಕೆಲಸ ಮಾಡುತ್ತೇವೆ, ಪಕ್ಷಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸೋಕೆ ನಾವು ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಜಿ20ಗೆ ನನಗೆ ಆಹ್ವಾನ ಬಂದಿಲ್ಲ : ಮಲ್ಲಿಕಾರ್ಜುನ ಖರ್ಗೆ
ಹರೀಶ್ ಗೌಡ ಚಿಕ್ಕಬಳ್ಳಾಪುರ ಲೋಕಸಭಾ ಆಕಾಂಕ್ಷಿನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಮೊದಲು ಕ್ಷೇತ್ರ ಪರಿಗಣನೆ ಮಾಡಿದ ನಂತರ ನಾವು ಬೇಡಿಕೆ ಇಡುತ್ತೇವೆ, ಕುಮಾರಣ್ಣನವರೇ ಎಂ.ಪಿ ಟಿಕೆಟ್ ಹರೀಶ್ ಗೆ ನೋಡೋಣ ಅಂತ ಹೇಳಿದ್ದಾರೆ ಏನಾಗುತ್ತೆ ನೋಡಬೇಕು ಎಂದರು.
ದೊಡ್ಡಬಳ್ಳಾಪುರ ದಲ್ಲಿ ಬೀದಿಬದಿ ವ್ಯಾಪಾರಿಗಳ ತೆರವು ವಿಚಾರವಾಗಿ ಪ್ರತಿಕ್ರಿಯಿಸಿ, ಶಾಸಕರು ಜೋಶ್‌ನಲ್ಲಿ ಇದ್ದಾರೆ, ಇನ್ನು ಅವರದು ಬಿಸಿ ರಕ್ತ, ಏನೇನ್ ಮಾಡ್ತಾರೋ ಮಾಡ್ಲಿ , ಜನರೇ ಉತ್ತರ ಕೊಡ್ತಾರೆ, ಈಗಾಗಲೇ ಮೂರು ತಿಂಗಳು ಆಯ್ತು , ಯಾವ ರೀತಿ ಕೆಲಸ ಮಾಡ್ತಿದ್ದಾರೆ, ಏನೇನು ಮಾಡ್ತಿದ್ದಾರೆ ಅಂತ ನೋಡ್ತಾ ಇದ್ದಾರೆ, 29 ಸಾವಿರ ಲೀಡಲ್ಲಿ ಗೆಲ್ಲಿಸಿದ್ದಾರೆ. ಜನರ ಸೇವೆ ಮಾಡಲಿ ಸ್ವಲ್ಪ ಕಾಲಾವಕಾಶ ಕೊಡೋಣ, ಜೆಡಿಎಸ್ ಬಿಜೆಪಿಯ ಬಿ ಟೀಂ ಟೀಕೆ ವಿಚಾರವಾಗಿ ಮಾತನಾಡಿ, ಬಿಟೀಂ ಅಂದೋರು ಹೋದ ವರ್ಷ ನಮ್ಮ ಜೆಡಿಎಸ್ ಮನೆಬಾಗಿಲಿಗೆ ಯಾಕೆ ಬಂದಿದ್ದರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.