Monday, December 4, 2023
spot_img
- Advertisement -spot_img

ಇಂದಿನಿಂದ ಏಟಿಗೆ ಏಟು, ಯಾರಿಗೂ ಹೆದರೋ ಮಾತೆ ಇಲ್ಲ; ಬಾಲಯ್ಯ

ಅಮರಾವತಿ: ಇಂದಿನಿಂದ ಏಟಿಗೆ ಏಟು, ಯಾರಿಗೂ ಹೆದರೋ ಮಾತೆ ಇಲ್ಲ ಎಂದು ಟಿಡಿಪಿ ಶಾಸಕ ಬಾಲಯ್ಯ ಗುಡುಗಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಜೈಲಿನಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಅವರು, ‘ಇಂದಿನಿಂದ ಏಟಿಗೆ ಏಟು.. ಯಾವುದಕ್ಕೂ. ಈ ಅಕ್ರಮ ಪ್ರಕರಣಗಳಿಗೆ ಹೆದರುವುದು ನಾವಲ್ಲ ಎಂದಿದ್ದಾರೆ.

ಪವನ್ ಕಲ್ಯಾಣ್ ಅವರ ಜನಸೇನಾ ಹಾಗೂ ಟಿಡಿಪಿ ಜಂಟಿಯಾಗಿ ಚುನಾವಣೆ ಎದುರಿಸಲಾಗುವುದು ಎಂದು ಘೋಷಿಸಿದ ಬಳಿಕ ಬಾಲಯ್ಯ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ವೈಎಸ್‌ಆರ್‌ಸಿಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ ಛಿದ್ರವಾದಾಗ ಭಯೋತ್ಪಾದಕ ದಾಳಿಗಳು ಕೊನೆಯಾಗುತ್ತೆ; ವಿ.ಕೆ ಸಿಂಗ್

ವೈಸಿಪಿ ನಾಯಕರೇ ನಾವು ದುರ್ಬಲರಾಗುತ್ತಿದ್ದೇವೆ ಎಂದು ಭಾವಿಸುತ್ತಿದ್ದೀರಾ ಆದರೆ.. ನಾವು ಇನ್ನೂ ಬಲಗೊಳ್ಳುತ್ತಿದ್ದೇವೆ. ರಾಜ್ಯದ ಭವಿಷ್ಯಕ್ಕಾಗಿ ಯುದ್ಧ ಸಾರಿದ್ದೇವೆ. ಮತ್ತೊಮ್ಮೆ ಹೇಳುತ್ತೇನೆ.. ನಾವು ಆಂಧ್ರದ ಜನರಿಗಾಗಿ ಹೋರಾಡುತ್ತೇವೆ. ಈ ಕದನದಲ್ಲಿ ಪವನ್ ಕಲ್ಯಾಣ್ ಕೂಡ ಜೊತೆಯಾಗಿರುವುದು ಒಳ್ಳೆಯ ವಿಚಾರವಾಗಿದೆ. ಯಾವುದೇ ತಪ್ಪು ಮಾಡದವನು ದೇವರಿಗೆ ಭಯಪಡುವುದಿಲ್ಲ. ತಪ್ಪು ಮಾಡಿದವರೆಲ್ಲ ಹೊರಗಿದ್ದರೆ ರಾಜ್ಯದ ಅಭ್ಯುದಯಕ್ಕೆ ಶ್ರಮಿಸಿದ ಚಂದ್ರಬಾಬು ಜೈಲು ಪಾಲಾಗಿದ್ದಾರೆ. ನಾವು ಭಯಪಡುವವರಲ್ಲ.. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸುತ್ತೇವೆ. ಜಗನ್ ಮುಖ್ಯಮಂತ್ರಿ ಆಗಿರುವುದು ಜನರ ದೌರ್ಭಾಗ್ಯ ಎಂದಿದ್ದಾರೆ.

ಇದನ್ನೂ ಓದಿ: ಹಿಂದಿ ಭಾರತವನ್ನು ಒಗ್ಗೂಡಿಸುತ್ತೆ ಎಂಬುದೇ ಅಸಂಬದ್ಧ; ಉದಯನಿಧಿ

ಇಂತಹ ದುರಂತ ದೇಶದಲ್ಲಿ ಎಲ್ಲಿಯೂ ನಡೆದಿಲ್ಲ. ದೇಶದ ಸಮಸ್ತ ಜನತೆ ಚಂದ್ರಬಾಬು ಅವರ ಜೊತೆಗಿದೆ. ಎಪಿಯ ಭವಿಷ್ಯ ಚೆನ್ನಾಗಿರಲಿ ಎಂದು ಪವನ್ ನನ್ನ ಆಶಯದಂತೆ ಮೈತ್ರಿ ತೀರ್ಮಾನಿಸಿದ್ದಾರೆ. ಪವನ್ ನಮ್ಮ ಜೊತೆ ಬಂದಿರುವುದು ಸಂತೋಷ ತರಿಸಿದೆ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles