ಬೆಂಗಳೂರು: ಮಂಡ್ಯ ಸೀಟ್, ತುಮಕೂರು ಸೀಟ್ ಇದ್ಯಾವುದೂ ಚರ್ಚೆನೇ ಆಗಿಲ್ಲ, ಮೈತ್ರಿ ಸುದ್ದಿ ವದಂತಿಯಷ್ಟೇ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ಎಂಬ ವದಂತಿ ಸಂಬಂಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ನಾನು ನಿನ್ನೆಯಿಂದ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಸೀಟು ಹಂಚಿಕೆ, ಹೊಂದಾಣಿಕೆ ಇದ್ಯಾವುದೂ ಇನ್ನೂ ಚರ್ಚೆಯೇ ಆಗಿಲ್ಲ, ಇದೆಲ್ಲ ವದಂತಿಗಳಷ್ಟೇ ಎಂದಿದ್ದಾರೆ. ಮಂಡ್ಯ ಸೀಟ್ ಏನಾಗುತ್ತೆ ಮಂಡ್ಯ ಸೀಟಿಗೆ ಹಠ ಹಿಡಿದಿದ್ದಾರೆ, ಕೋಲಾರ ಸೀಟ್, ತುಮಕೂರು ಸೀಟ್ ಇದ್ಯಾವುದೂ ಚರ್ಚೆ ಆಗಿಲ್ಲ.
ಇದನ್ನೂ ಓದಿ: BPL Card : ಬಿಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್!
ನಿನ್ನೆ ಯಡಿಯೂರಪ್ಪನವರ ಹೇಳಿಕೇನೂ ಗಮನಿಸಿದ್ದೇನೆ. ನಮ್ಮ ಪಕ್ಷದ ಬಗ್ಗೆ, ದೇವೇಗೌಡರ ಬಗ್ಗೆ, ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಮುಂದಿನ ದಿನದಲ್ಲಿ ಒಟ್ಟಾಗಿ ಕೆಲಸ ಮಾಡ್ತೇವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದರು.
ಇದನ್ನೂ ಓದಿ: ಕೈ ಶಾಸಕ, ಬಿಜೆಪಿ ಸಂಸದರ ನಡುವೆ ಸಕ್ಕರೆ ಕಾರ್ಖಾನೆಯ ಹಗ್ಗ ಜಗ್ಗಾಟ
ಇದೆಲ್ಲಾ ಆರಂಭಿಕ ಹಂತದ ಮಾತುಗಳಷ್ಟೆ. ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇಲ್ಲಿ ಯಾರಿಗೆ ಯಾರೂ ಅನಿವಾರ್ಯ ಇಲ್ಲ. ನಾವು ಸ್ವತಂತ್ರ್ಯವಾಗಿ 2 ಸೀಟು 3 ಸೀಟು ಗೆದ್ದಿದೇವೆ. ಏನೋ ಒಂದು ಚುನಾವಣೆಯಲ್ಲಿ 19 ಸೀಟಿಗೆ ನಾವ್ ಬಂದ್ವಿ ಅವ್ರು 136 ಸೀಟ್ ಬಂದ್ರು. ಇಷ್ಟಕ್ಕೆ ಏನೋ ಆಗೋಯ್ತು ಅಂತ ಬಿಂಬಿಸ್ತಿದ್ದಾರೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.