ಹುಬ್ಬಳ್ಳಿ : ಚೈತ್ರಾ ಕುಂದಾಪುರ ತರಹದ ಜನರು ಎಲ್ಲ ಪಕ್ಷಗಳಲ್ಲಿ ಇರುತ್ತಾರೆ. ದುಡ್ಡು ಮಾಡೋದು , ಜನರಿಗೆ ಮೋಸ ಮಾಡುವುದು ಅವರ ಕೆಲಸ. ಇದು ಮೊದಲ ಘಟನೆ ಅಲ್ಲ, ಮೋಸ ಹೋಗುವವರು ಇರುವವರಿಗೂ ಇದು ಕೊನೆ ಆಗಲ್ಲ. ಈ ಬಗ್ಗೆ ನಮ್ಮ ಪಕ್ಷ ಮೊದಲೆ ತಿಳಿಸಿತ್ತು ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲೆಲ್ಲೊ ದುಡ್ಡು ಮಾಡಿದವರು, ಹೇಗೆ ರಾಜಕೀಯ ಮಾಡಬೇಕು ಎಂದು ಗೊತ್ತಿಲ್ಲದವರು ಇಂತಹ ಡಮ್ಮಿ ವ್ಯಕ್ತಿಗಳಿಂದ ಮೋಸ ಹೋಗುತ್ತಾರೆ. ಚೈತ್ರಾ ಕುಂದಾಪುರ ಬಿಜೆಪಿ ಪಕ್ಷದವರಲ್ಲ, ಪಕ್ಷ ಸಿದ್ಧಾಂತದ ಬಗ್ಗೆ ಮಾತನಾಡಿದ ತಕ್ಷಣ ಬಿಜೆಪಿಯವರಾಗಲ್ಲ, ಇವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : Special Session : ಸಂಸತ್ತಿನ ವಿಶೇಷ ಅಧಿವೇಶನ : ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ
ಪಕ್ಷದಲ್ಲಿ ಟಿಕೆಟ್ ಪಡೆಯಲು ಒಂದು ಪದ್ದತಿಯಿದೆ. ಯಾವ ರಾಜಕೀಯ ಪಕ್ಷಗಳು ಇಂತಹ ಟೋಪಿ ಹಾಕುವವರನ್ನು ಬೆಳೆಸುವುದಿಲ್ಲ. ಇವರೆಲ್ಲ ಟಿಕೆಟ್ ಆಕಾಂಕ್ಷಿಗಳ ಅಡ್ವಾಂಟೇಜ್ ತೆಗೆದುಕೊಳ್ಳುವ ಜನರು ಎಂದು ಕಿಡಿ ಕಾರಿದರು.
ಜಗದೀಶ್ ಶೆಟ್ಟರ್ ಈಗ ಕಾಂಗ್ರೆಸ್ ಸೇರಿದ್ದಾರೆ. ಅವರು ಕಾಂಗ್ರೆಸ್ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಅವರ ಮನಸ್ಸು ಇನ್ನೂ ಬಿಜೆಪಿಯಲ್ಲಿದೆ, ಈ ಬಗ್ಗೆ ಹೆಚ್ಚಿಗೆ ಮಾತನಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ ಯಾರೂ ಶೆಟ್ಟರನ್ನು ಗುರುತಿಸುತ್ತಿಲ್ಲ..
ಬಿಜೆಪಿಯಲ್ಲಿ ಟಿಕೆಟ್ ಮಾರಾಟ ಪದ್ದತಿಯಿಲ್ಲ. ಕೆಲವರು ತಮ್ಮ ಚಟಕ್ಕೆ ಮಾಡಿದರೆ, ಅದಕ್ಕೆ ಬಿಜೆಪಿ ಉತ್ತರ ನೀಡುವುದಿಲ್ಲ. ಚೈತ್ರಾ ಕುಂದಾಪುರ ಪ್ರಕರಣಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಮಾಜಿ ಸಿಎಂ ಹೇಗೆ ಟಿಕೆಟ್ ಪಡೆದುಕೊಂಡಿದ್ದರು? ತಾವು ಹೇಗೆ ಟಿಕೆಟ್ ಕೊಟ್ಟಿದ್ದರು? ಎಂದು ಎಲ್ಲ ಗೊತ್ತಿದೆ, ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಅವರನ್ನು ಶಾಸಕ ಮಹೇಶ್ ಟೆಂಜಿನಕಾಯಿ ಕುಟುಕಿದರು.
ಇದನ್ನೂ ಓದಿ : ‘ವಿಶೇಷ ಅಧಿವೇಶನ ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಲಿದೆ’
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತೀ ಹೆಚ್ಚು ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳನ್ನು ಕೊಟ್ಟಿದ್ದು ಬಿಜೆಪಿ. ಶೆಟ್ಟರ್ ಅವರಿಗೆ 30 ವರ್ಷ, ಬಿಜೆಪಿ ಎಲ್ಲ ಕೊಟ್ಟಿದೆ. ನಿಮಗೆ ಅನ್ಯಾಯವಾಗಿದ್ದರೆ ನಿಮಗೆ ತಾಕತ್ ಇದ್ರೆ ನೀವು ಸರಿಮಾಡಿಕೊಳ್ಳಿ. ರಾಜಕೀಯದಲ್ಲಿ ಸಮುದಾಯವನ್ನು ಎಳೆದು ತರಬಾರದು ಎಂದು ಟೆಂಗಿನಕಾಯಿ ಕಿಡಿ ಕಾರಿದರು.
ರಾಜಕೀಯಕ್ಕೂ, ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ನಲ್ಲಿ ಯಾರೂ ಶೆಟ್ಟರನ್ನು ಗುರುತಿಸುತ್ತಿಲ್ಲ. ಇದರಿಂದಾಗಿ ಅವರಿಗೆ ಕಷ್ಟ ಆಗಿದೆ, ಹೀಗಾಗಿ ಅವರು ಮಾಧ್ಯಮಗಳಿಗೆ ಏನಾದರೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.