Friday, September 29, 2023
spot_img
- Advertisement -spot_img

‘ವಾಟ್ಸಪ್ ಗ್ರೂಪ್ ಮಾಡಿಕೊಂಡು ಸೋಮಶೇಖರ್‌ಗೆ ತೊಂದರೆ ಕೊಡ್ತಿದ್ದಾರೆ’

ಬೆಂಗಳೂರು: ‘ಯಶವಂತಪುರ ಕ್ಷೇತ್ರದಲ್ಲಿ ವಾಟ್ಸಪ್ ಗ್ರೂಪ್ ಮಾಡಿಕೊಂಡು ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ಕೆಲವರಿಗೆ ತೊಂದರೆ ಕೊಡುತ್ತಿದ್ದಾರೆ. ತೊಂದರೆ ಕೊಡುತ್ತಿರುವ ಒಂದಷ್ಟು ಜನರ ಹೆಸರನ್ನು ಅವರು ಹೇಳಿದ್ದಾರೆ’ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದರು.

ಎಸ್ ಟಿ ಸೋಮಶೇಖರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹ ಜೋರಾದ ಹಿನ್ನೆಲೆ, ಇಂದು ಅವರನ್ನು ತಮ್ಮ ಜಯನಗರದ ನಿವಾಸಕ್ಕೆ ಕರೆಸಿ ಸಂಧಾನ ಸಭೆ ನಡೆಸಿದರು. ಮಾತುಕತೆ ನಂತರ ಮಾತನಾಡಿದ ಅಶೋಕ್, ‘ಎಸ್.ಟಿ. ಸೋಮಶೇಖರ್ ಬಂದು ಭೇಟಿ ಮಾಡಿದರು; ಒಂದು ಗಂಟೆ ಚರ್ಚೆ ಮಾಡಿದ್ದೇನೆ. ಯಶವಂತಪುರ ಕ್ಷೇತ್ರದಲ್ಲಿ ಕೆಲವರು ವಾಟ್ಸಪ್ ಗ್ರೂಪ್ ಮಾಡಿಕೊಂಡು ಅವರಿಗೆ ತೊಂದರೆ ಕೊಡುತ್ತಿದ್ದಾರೆ. ಅವರೇ ಕಾರ್ಪೊರೇಷನ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ. ತೊಂದರೆ ಕೊಡುತ್ತಿರುವ ಒಂದಷ್ಟು ಜನರ ಹೆಸರು ಹೇಳಿದ್ದಾರೆ’ ಎಂದರು.

‘ಕಾರ್ಪೊರೇಷನ್ ಟಿಕೆಟ್ ಸಿಗುತ್ತೆ ಎಂಬ ಕಾರಣಕ್ಕೆ ಕೆಲ ಬೆಂಬಲಿಗರು ಕಾಂಗ್ರೆಸ್‌ ಪಕ್ಷಕ್ಕೆ ಹೋಗಿದ್ದಾರೆ; ನಾನು ಹೋಗುವುದಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. ಅವರು ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೇನೆ. ಸವಿಸ್ತಾರವಾಗಿ ಮಾತನಾಡಿದ್ದೇನೆ’ ಎಂದರು.

ಇದನ್ನೂ ಓದಿ; ದೆಹಲಿಯಿಂದ ಮೆಸೇಜ್ ಬಂದಿಲ್ಲ; ಬಂದ್ರೆ ಹೋಗ್ತೀನಿ: ಎಸ್.ಟಿ. ಸೋಮಶೇಖರ್

‘ಚುನಾವಣೆ ಎಂದರೆ ಏನು? ಮತದಾರರ ಮೇಲೆ ಏನು ಪರಿಣಾಮ ಎಂದು ತಿಳಿಸಿದ್ದೇನೆ. ಮಾತುಕತೆ ನಂತರ ಅವರು ಪಕ್ಷ ಬಿಡುವುದಿಲ್ಲ ಎಂದಿದ್ದಾರೆ. ಸ್ಥಳೀಯವಾಗಿ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಒಂದು ರೀತಿ ಸುಂಟರಗಾಳಿ ಎದ್ದಿದೆ, ಇದು ನಮಗೆ ಎಚ್ಚರಿಕೆ ಗಂಟೆ. ಇದೆಲ್ಲವನ್ನೂ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಜಿ.ವಿ. ರಾಜೇಶ್ ಅವರ ಗಮನಕ್ಕೆ ತರುತ್ತೇನೆ. ಸೋಮಶೇಖರ್ ಅವರನ್ನು ಕಾಂಗ್ರೆಸ್‌ನವರು ಎಂಪಿ ಅಭ್ಯರ್ಥಿಯಾಗಲು ಆಹ್ವಾನಿಸಿರುವುದು ನಿಜ. ಆದರೆ, ಯಾವುದೇ ಕಾರಣಕ್ಕೂ ಅವರು ಅಭ್ಯರ್ಥಿ ಆಗಲ್ಲ ಎಂದಿದ್ದಾರೆ’ ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವ ಕುರಿತು ಮಾತನಾಡಿ, ‘ಕಾಂಗ್ರೆಸ್ ಏನೇ ಮಾಡಿದರೂ ಮೋದಿ ಎದುರು ಗೆಲ್ಲಲು ಆಗಲ್ಲ. ಆಮಿಷದ ಜತೆಗೆ ಭಯವನ್ನೂ ಹುಟ್ಟಿಸಿ ಪಕ್ಷಾಂತರಕ್ಕೆ ಕಾಂಗ್ರೆಸ್ ಪ್ರಯತ್ನಿಸುತ್ತದೆ. ಅಧಿಕಾರ ಸಿಕ್ಕಿದೆ ಅಂತ ಈ ರೀತಿ ದೌರ್ಜನ್ಯ ಮಾಡುವುದು ಒಳ್ಳೆಯದಲ್ಲ. ದೇವರು ಅಧಿಕಾರ ಕೊಟ್ಟಾಗ ಈ ರೀತಿ ಮಾಡಬಾರದು. ನಮಗೆ ಮೆಜಾರಿಟಿ ಇರಲಿಲ್ಲ,ಆಪರೇಷನ್ ಮಾಡಿದೆವು. ಆದರೆ ಮೆಜಾರಿಟಿ ಇದ್ದರೂ ಮಾಡ್ತೀರಿ ಎಂದರೆ ದುರಹಂಕಾರ ಎನ್ನಬೇಕು’ ಎಂದರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles