ಬೆಂಗಳೂರು: ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಶನಿವಾರ ಮುಂಜಾನೆ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಎರಡು ಬಸ್ ನಲ್ಲಿ ಜನ ಕಳಿಸುವಂತೆ ಯಶವಂತಪುರ ಬಿಜೆಪಿ ಅಧ್ಯಕ್ಷರು ಹೇಳಿದ್ದರು ಎಂದು ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಸಂಬಂಧ ಗ್ರಾಮಪಂಚಾಯಿತಿ ಸದಸ್ಯರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೋಮಶೇಖರ್, ‘ಮೋದಿ ಸ್ವಾಗತಿಸಲು ಎರಡು ಬಸ್ ನಲ್ಲಿ ಜನ ಕಳಿಸುವಂತೆ ಯಶವಂತಪುರ ಬಿಜೆಪಿ ಘಟಕದ ಅಧ್ಯಕ್ಷರು ಹೇಳಿದ್ದರು; ಹಿಂದಿನ ದಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ಮಾಡಿದ್ದಾರೆ. ಆ ಸಭೆ ಬಗ್ಗೆಯೂ ನನಗೆ ಮಾಹಿತಿ ಇರಲಿಲ್ಲ’ ಎಂದರು.
ಇದನ್ನೂ ಓದಿ; ‘ಜವಾಬ್ದಾರಿಯುತ ಶಾಸಕನಾಗಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಲೇಬೇಕು’
‘ಜನ ಕರೆದುಕೊಂಡು ಬನ್ನಿ ಎಂದು ಹೇಳಿದ್ದರು. ಆದರೆ, ಮೋದಿ ಎಷ್ಟೊತ್ತಿಗೆ ಬರ್ತಾರೆ, ಹೇಗೆ ಬರ್ತಾರೆ ಅನ್ನೊ ಮಾಹಿತಿ ಕೂಡ ಇರಲಿಲ್ಲ. ಸುಮಾರು ಮೂರುವರೆ ವರ್ಷದ ಅವಧಿಯಲ್ಲಿ ಬಿಜೆಪಿಯ ಎಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆನೆ. ಕಾರ್ಯಕ್ರಮದಲ್ಲಿ ಬಾಗಿಯಾಗಿಲ್ಲ ಎಂಬ ಕಪ್ಪುಚುಕ್ಕೆ ಒಂದೇ ಒಂದು ಇಲ್ಲ. ಇತ್ತಿಚೇಗೆ ಎರಡು ಮೂರು ಕಾರ್ಯಕ್ರಮಕ್ಕೆ ಹೋಗಿಲ್ಲ ಎಂಬ ಮಾಹಿತಿ ಇರಬಹುದು. 100 ಕ್ಕೆ 99% ಪಕ್ಷ ಹಾಗೂ ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ’ ಎಂದು ಮೋದಿ ಸಭೆಗೆ ಆಹ್ವಾನವಿರಲಿಲ್ಲ ಎಂದು ಎಸ್ ಟಿ ಸೋಮಶೇಖರ್ ಪರೋಕ್ಷವಾಗಿ ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.