Sunday, October 1, 2023
spot_img
- Advertisement -spot_img

135 ಶಾಸಕರಿದ್ರು ಆಡಳಿತ ನಡೆಸಲು ನಮ್ಮದೇ ವೀರ್ಯಾಣು ಬೇಕಾ?; ಯತ್ನಾಳ್ ವಿವಾದ

ಬಳ್ಳಾರಿ: 135 ಶಾಸಕರಿದ್ರು ಆಡಳಿತ ನಡೆಸಲು ನಮ್ಮದೇ ವೀರ್ಯಾಣು ಬೇಕಾ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಲೋಕಸಭೆ ಎದುರಿಸಲು ಕಾಂಗ್ರೆಸ್‌ನವರಿಗೆ ಧಮ್ ಇಲ್ಲ. 135 ಶಾಸಕರಿದ್ರೂ ನಿಮಗೆ ನಮ್ಮ ವೀರ್ಯಾಣು ಬೇಕಾ ? ಎಂದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಕ್ಕೊಬ್ಬ ಬಿಜೆಪಿಯ ಮಾಜಿ, ಹಾಲಿ ಶಾಸಕರನ್ನು ಕರೆದು ಡಿಕೆಶಿ ಮಾತನಾಡುತ್ತಾನೆ. 5 ಲಕ್ಷ ರೂ. ಸಿಗುತ್ತೆ ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳ್ತಾನೆ, ನಾನು 5 ಕೋಟಿ ರೂ. ಕೊಡ್ತೀನಿ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನಾ.? ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ತಾರೆ ಅಂದ್ರೆ ನಾಳೆಯೇ 5 ಕೋಟಿ ರೂ. ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡ್ತೀನಿ ಇದು ಚಾಲೆಂಜ್ ಎಂದರು.

ಇದನ್ನೂ ಓದಿ: ಸರ್ಕಾರದ ಯೋಜನೆ ಶ್ಲಾಘಿಸಿ ಪತ್ರ ಬರೆದಿದ್ದ ವಿದ್ಯಾರ್ಥಿನಿ ಭೇಟಿಯಾದ ಸಿಎಂ

ಇಂತ ಸಚಿವರನ್ನು ಇಟ್ಟುಕೊಂಡು ಅಧಿಕಾರ ನಡೆಸೋದಕ್ಕೆ ಆಗಲ್ಲ ಅಂತ ಬಿಜೆಪಿಗರ ಕರೆಯುತ್ತಿದ್ದಾರೆ. ಡಿಸೆಂಬರ್ ನೋಡಿ ಸರ್ಕಾರ ಉಳಿಯೋದಿಲ್ಲ, ಇನ್ನೂ 5 ವರ್ಷ ಆಳೋದು ದೂರವೇ ಉಳಿತು. ಜವಾಬ್ದಾರಿ ಸ್ಥಾನದಲ್ಲಿ ಇದ್ದವರು ಹಗುರವಾಗಿ ಮಾತನಾಡ್ತಾರೆ. ಈ ಸರ್ಕಾರಕ್ಕೆ ಅಸ್ಥಿತ್ವವೇ ಇಲ್ಲ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles