ಬೆಂಗಳೂರು: ಚಂದ್ರಯಾನ್-3 ಮಿಷನ್ ಯಶಸ್ವಿಯಾಗಿ ಗುರಿ ತಲುಪಿರುವ ಬೆನ್ನಲ್ಲೇ ಇಸ್ರೋಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಚಂದ್ರನ ದಕ್ಷಿಣ ದ್ರುವ ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆ ಕೊಟ್ಟ ಇಸ್ರೋ ವಿಜ್ಞಾನಿಗಳ ಕಾರ್ಯ ಹಾಡಿ ಹೊಗಳಲಾಗಿದೆ. ದೇಶ-ವಿದೇಶದ ಗಣ್ಯರು ಇಸ್ರೋಗೆ ಶುಭ ಕೋರಿದ್ದಾರೆ.
ಇತ್ತ ಚಂದ್ರನ ಮೇಲ್ಮೈ ತಲುಪಿರುವ ಲ್ಯಾಂಡರ್ ಮೊದಲ ಫೋಟೋವನ್ನು ಭೂಮಿಗೆ ಕಳುಹಿಸಿದೆ. ದೂರದಿಂದ ಚಂದ್ರ ಸುಂದರವಾಗಿ ಕಂಡರೂ ಚಂದ್ರನ ಅತ್ಯಂತ ಹತ್ತಿರದ ನೋಟ ಕಂಡು ಜನ ನಿಬ್ಬೆರಗಾಗಿದ್ದಾರೆ.
ಇದನ್ನೂ ಓದಿ: ಚಂದ್ರನ ಅಧ್ಯಯನಕ್ಕೆ ಲ್ಯಾಂಡರ್‌ನಿಂದ ಹೊರಬಂದ ಪ್ರಗ್ಯಾನ್ ರೋವರ್!
ಈ ಫೋಟೋಗಳ ಬಳಸಿ ನಟ ಡ್ಯಾನಿಶ್ ಸೇಠ್ ಮಾಡಿದ್ದ ಟ್ವೀಟ್ ಸದ್ಯ ವೈರಲ್ ಆಗಿದೆ. ವಿಕ್ರಮ್ ಲ್ಯಾಂಡರ್ ಕಳುಹಿಸಿದ್ದ ಚಂದ್ರನ ಮೊದಲ ಫೋಟೋ ಟ್ವೀಟ್ ಮಾಡಿರುವ ಡ್ಯಾನಿಶ್ ‘ಇದು ಕೋರಮಂಗಲದಂತಿದೆ’ ಎಂದಿದ್ದಾರೆ. ಚಂದ್ರನ ಫೋಟೋ ಹಾಗೂ ಕೋರಮಂಗಲದ ರಸ್ತೆ ನೋಡಲು ಒಂದೇ ತರಹದ್ದಾಗಿದೆ ಎಂಬುದು ಅವರ ಟ್ವೀಟ್ ಗೂಡಾರ್ಥವಾಗಿದೆ. ಹೀಗಾಗಿ ತಮಾಷೆಯಾಗಿ ತೆಗೆದುಕೊಂಡ ಜನ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಬೆಂಗಳೂರು ನಗರಗಳ ಹೆಸರುಗಳನ್ನೆಲ್ಲಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ʼಇಸ್ರೋʼಗೆ ವಿಶ್ ಮಾಡಲು ನಮ್ಮ ಬೆಂಗಳೂರಿಗೆ ಬರ್ತಿದ್ದಾರೆ ಮೋದಿ
ಬೆಂಗಳೂರು ರಸ್ತೆಯಲ್ಲಿ ಕಾಣಸಿಗುವ ಹೊಂಡ-ಗುಂಡಿಗೂ ಚಂದ್ರನ ಮೇಲ್ಮೈಗೂ ಹೋಲಿಕೆ ಮಾಡಲಾಗಿದ್ದು, ಡ್ಯಾನಿಶ್ ಸೇಠ್ ಟ್ವೀಟ್ ವೈರಲ್ ಆಗುತ್ತಿದೆ. ತಮ್ಮ ವಿಭಿನ್ನ ಆಲೋಚನೆಗಳ ವಿಡಿಯೋ ಮೂಲಕ ಫೇಮಸ್ ಆಗಿರುವ ಸೇಠ್ ಈಗ ಚಂದ್ರನ ನೋಡಿ ರಸ್ತೆಗುಂಡಿಗೆ ಹೋಲಿಸಿದ್ದಾರೆ. ಇದಕ್ಕೂ ಮೊದಲು 2019ರಲ್ಲಿ ಬೆಂಗಳೂರು ಕಲಾವಿದ ಬಾದಲ್ ನಂಜುಂಡಸ್ವಾಮಿ ಚಂದ್ರನ ಮೇಲೆ ನಡೆಯುವಂತೆ ಬೆಂಗಳೂರು ರಸ್ತೆ ಗುಂಡಿ ಮೇಲೆ ನಡೆದು ವೈರಲ್ ಆಗಿದ್ದರು, ಹಾರೋಹಳ್ಳಿ ಬಳಿ ರಸ್ತೆಗುಂಡಿ ಮೇಲೆ ವಿಡಿಯೋ ಶೂಟ್ ಮಾಡಿ ಚಂದ್ರನ ಮೇಲೆ ನಡೆಯುತ್ತಿರುವ ಗಗನಯಾತ್ರಿಯಂತೆ ಬಿಂಬಿಸಿದ್ದ ನಂಜುಂಡಸ್ವಾಮಿ ರಸ್ತೆ ಗುಂಡಿ ವಿರುದ್ಧ ಪ್ರತಿಭಟಿಸಿದ್ರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.