Monday, December 4, 2023
spot_img
- Advertisement -spot_img

ಸ್ಮಾರಕಗಳ ದತ್ತು ಪಡೆದವರಿಗೆ ಬಹುಮಾನ: ಹೆಚ್.ಕೆ.ಪಾಟೀಲ್

ಬೆಂಗಳೂರು: ‘ನಮ್ಮ ಸ್ಮಾರಕ ಯಾತ್ರೆ’ ಎಂಬ ಹೆಸರಿನಲ್ಲಿ ಪ್ರವಾಸೋದ್ಯಮ ಹಾಗೂ ಪುರಾತತ್ವ ಇಲಾಖೆಯಡಿ ಮೂರು ದಿನದ ಪ್ರವಾಸ ಮಾಡಿದ್ದೇವೆ. ನವೆಂಬರ್ 6ರಂದು ಪ್ರವಾಸ ಕೈಗೊಂಡಿದ್ದೆವು. 8 ನೇ ತಾರೀಕಿನವರೆಗೂ ಮಾಡಲಾದ ಈ ಪ್ರವಾಸದಲ್ಲಿ ಸ್ಮಾರಕ ದರ್ಶನದ ಮೊದಲ ಹಂತ ಮುಗಿದಿದೆ. ಈ ಸಂದಭದಲ್ಲಿ ಹತ್ತು ಹಲವು ಸ್ಮಾರಕ ದರ್ಶನ ಪಡೆಯಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ನಡೆಯುತ್ತಿರುವ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಯಾತ್ರೆಯನ್ನು ಬೀದರಿನಲ್ಲಿರುವ ನರಸಿಂಹಸ್ವಾಮಿ ದರ್ಶನ, ಗುಹಾಂತರ ದೇವಾಲಯ ನೋಡುವ ಮೂಲಕ ಆರಂಭಿಸಿದೆವು. ಇಲ್ಲಿ ಅಂಡರ್ ಗ್ರೌಂಡ್ ವಾಟರ್ ಸಿಸ್ಟಮ್ ಹಾಗೂ ಡ್ರೈನೇಜ್ ಸಿಸ್ಟಮ್ ಇದೆ. ಒಂದಿಷ್ಟು ಮ್ಯಾನ್ಯುಯಲ್ ಡ್ಯಾಮೇಜ್ ಆಗಿದೆ. ಹಾನಿಯಾಗಿರುವ ಸ್ಮಾರಕಗಳ ದುರಸ್ತಿ ಕಾರ್ಯ ಹಾಗೂ ರಕ್ಷಣೆ ಮಾಡಲು ನಿರ್ಧಾರ ಮಾಡಲಾಗಿದೆ. ನಂತರದ ದಿನ ನಾಗಾಮಿ ವಿಶ್ವ ವಿದ್ಯಾನಿಲಯಕ್ಕೆ ಹೋದೆವು. ಅಲ್ಲಿ ಸಭೆ ಕೂಡ ಮಾಡಲಾಯಿತು. ಇತಿಹಾಸಕಾರರಿಂದ ಆ ಸ್ಮಾರಕಗಳ ಬಗ್ಗೆ ಚರ್ಚೆ ಮಾಡಲಾಯಿತು. ಅಲ್ಲಿಂದ ಮಳಕೇಡ್ ಕೋಟೆಗೂ ಹೋಗಿದ್ದೆವು ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಸೇರುವವರ ದೊಡ್ಡ ಪಟ್ಟಿ ನನ್ನ ಬಳಿ ಇದೆ: ಡಿಕೆಶಿ

ಸ್ಮಾರಕಗಳ ರಕ್ಷಣೆಗೆ ಡಿಸೆಂಬರ್ ಒಂದರಿಂದ ಸ್ವಚ್ಚತಾ ಕಾರ್ಯ ಆರಂಭ ಮಾಡಲಿದ್ದೇವೆ. ಡಿಸೆಂಬರ್ ಅಂತ್ಯದವರೆಗೆ ಈ ಸ್ವಚ್ಛತಾ ಕಾರ್ಯ ನಡೆಯಲಿದೆ. ಜನವರಿ 1ರಿಂದ 10ರೊಳಗೆ ನಾಗಾಮಿಯಲ್ಲಿರುವ ಎಲ್ಲಾ ಶಿಲಾಶಾಸನಗಳನ್ನ ನೋಟಿಫೈ ಮಾಡಲು ಸೂಚನೆ ಮಾಡಲಾಗಿದೆ. ಸಂಶೋಧನೆ ಮಾಡಲು ಎರಡು ಮೂರು ವಿವಿ ಕುಲಪತಿಗಳ ಜೊತೆ ಮಾತುಕತೆ ಮಾಡಿದ್ದೇವೆ. ಅದಾದ ಮೇಲೆ ಉನ್ನತ ಮಟ್ಟದ ಸಂಶೋಧನೆ ಅಗತ್ಯ ಇದೆ. ನಾಗಾಮಿ ಸ್ಮಾರಕ ಶಿಲಾಶಾಸನಗಳು ಕನ್ನಡಿಗರು ಆಶ್ಚರ್ಯಪಡುವ ಇತಿಹಾಸ ಹೇಳಲಿವೆ ಎಂದು ಹೆಮ್ಮೆ ಪಟ್ಟಿದ್ದಾರೆ.

ನಮ್ಮ ಕನ್ನಡದ ಪ್ರಥಮ ವಿಶ್ವವಿದ್ಯಾಲಯದ ಐತಿಹಾಸಿಕ ಸ್ಮಾರಕದ ಸ್ಥಿತಿಯನ್ನು ಪುರಾತತ್ವ ಇಲಾಖೆ ಗುರುತಿಸಿದೆ. ನಮ್ಮ ಸಂರಕ್ಷಣೆಯ ಪ್ರಯತ್ನದ ಹಾದಿಯಲ್ಲಿ ಡಿಸೆಂಬರ್ ಒಂದನೇ ತಾರೀಖಿನಿಂದ ಸಂಪೂರ್ಣ ಸ್ವಚ್ಚ ಗೊಳಿಸುವ ಕೆಲಸ ಪ್ರಾರಂಭ ಮಾಡಲಿದ್ದೇವೆ. ಡಿಸೆಂಬರ್ ಅಂತ್ಯದ ಹೊತ್ತಿಗೆ ಪೂರ್ಣಗೊಲಿಸುತ್ತೇವೆ. ಉನ್ನತ ಮಟ್ಟದ ಸಂಶೋಧನೆ ಅಗತ್ಯವಿದೆ. ಕನ್ನಡಿಗರು ಅಭಿಮಾನ ಪಡುವ ಇತಿಹಾಸವನ್ನು ಇದು ಹೇಳುತ್ತದೆ. ನಾಗಾವಿ ವಿಶ್ವವಿದ್ಯಾಲಯದ ಅವಶೇಷಗಳ ಸಂರಕ್ಷಣೆ ಮತ್ತು ಸಂಶೋಧನೆಯನ್ನ ನಮ್ಮ ಇಲಾಖೆ ಕೈಗೊಳ್ಳುತ್ತದೆ. ಇದು ರಾಷ್ಟ್ರಕೂಟರ ಕಾಲದಲ್ಲಿ ಅಂದರೆ ಎರಡನೇ ಶತಮಾನದಲ್ಲಿ ಸ್ಥಾಪನೆ ಆಗಿತ್ತು ಎಂದು ಹೇಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಸೋನಿಯಾ ಗಾಂಧಿ ನನ್ನನ್ನು ಸಿಎಂ ಮಾಡ್ತಾರೆ’: ‘ಕೈ’ ನಾಯಕನ ವಿಡಿಯೋ ವೈರಲ್

ಕೃಷ್ಣ ಕೃತಿ ಫೌಂಡೇಶನ್ ಎಂಬುವವರು ಮಾಳಖೇಡ ಕೋಟೆ ಸಂರಕ್ಷಣೆ ಯನ್ನು ದತ್ತು ಪಡೆದಿದ್ದಾರೆ. ಯಾದಗಿರಿಯ ಶಿರವಾಳದ ಅನೇಕ ಗುಡಿಗಳನ್ನು ನೋಡಿದೆವು. ಅದರಲ್ಲಿ ಒಂದು ಗುಡಿಯ ಸಂರಕ್ಷಣೆಯ ಹೊಣೆಯನ್ನು ನಾವು ಈಗ ತೆಗೆದುಕೊಂಡಿದ್ದೇವೆ. ಇನ್ನೂ ಬಹಳಷ್ಟು ಗುಡಿಗಳ ಸಂರಕ್ಷಣೆ ಕೆಲಸ ಅಲ್ಲಿ ಆಗಬೇಕಿದೆ. ಎರಡನೇ ಹಂತದಲ್ಲಿ ನವೆಂಬರ್ 20ರಂದು ಐಹೊಳೆ, ಮಹಾಕೂಟ, ಬನಶಂಕರಿ ಪ್ರವಾಸ ಮಾಡಲಿದ್ದೇವೆ. ಯಾರು ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿ ಮಾಡುತ್ತಾರೋ ಅವರಿಗೆ ಬಹುಮಾನ ಇರಲಿದೆ ಎಂದಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles