Wednesday, March 22, 2023
spot_img
- Advertisement -spot_img

ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಗೊಂದಲ : ಸಭೆ ನಡೆಸಲು ಮಾಜಿ ಸಿಎಂ ಹೆಚ್ ಡಿಕೆ ನಿರ್ಧಾರ

ಬೆಂಗಳೂರು: ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ಹಾಸನ ಟಿಕೆಟ್ ವಿಚಾರದಲ್ಲಿ ದಿನಕ್ಕೊಂದು ಗೊಂದಲ, ಗಲಾಟೆ ನಡೆಯುತ್ತಿದೆ. ಯಾರಿಗೆ ಹಾಸನ ಟಿಕೆಟ್ ಅನ್ನೋ ಚರ್ಚೆ ಜೋರಾಗಿ ನಡೆಯುತ್ತಿದೆ.

ಸ್ವರೂಪ್ ಮತ್ತು ಭವಾನಿ ರೇವಣ್ಣ ನಡುವೆ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಹಾಸನ ಟಿಕೆಟ್ ಗೊಂದಲ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈ ತಿಂಗಳಲ್ಲಿ ಸಭೆ ನಡೆಸಲು ನಿರ್ಧಾರ ಮಾಡಿದ್ದಾರೆ. ಸಭೆಯಲ್ಲಿ ಟಿಕೆಟ್ ಯಾರಿಗೆ ಕೊಡಬೇಕು ಎಂದು ನಿರ್ಧಾರ ಮಾಡಲಿದ್ದಾರೆ.

ಹಾಸನದಲ್ಲಿ ಸಭೆ ಮಾಡಿ ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡುವುದು, ಕಾರ್ಯಕರ್ತರ ಜೊತೆ ಕ್ಷೇತ್ರದ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡುವುದು, ಕ್ಷೇತ್ರದಲ್ಲಿ ಯಾರ ಪರ ಒಲವಿದೆ ಎಂದು ಅಭಿಪ್ರಾಯ ಸಂಗ್ರಹ ಮಾಡಿ, ಯಾರಿಗೆ ಟಿಕೆಟ್ ಕೊಟ್ಟರೆ ಉತ್ತಮ ಎಂದು ಜನಾಭಿಪ್ರಾಯ ಸಂಗ್ರಹ ಮಾಡುವ ಪ್ಲ್ಯಾನ್ ಮಾಡಿದ್ದಾರೆ.

ಭವಾನಿ ಮತ್ತು ಸ್ವರೂಪ್‌ರನ್ನು ಕೂರಿಸಿ ಗೊಂದಲಕ್ಕೆ ತೆರೆ ಎಳೆಯಲು ಕುಮಾರಸ್ವಾಮಿ ಪ್ಲ್ಯಾನ್ ಮಾಡಿದ್ದಾರೆ. ಸಭೆಯಲ್ಲಿ ಕುಮಾರಸ್ವಾಮಿ ಕ್ಷೇತ್ರದ ನಾಯಕರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ಅಂತಿಮ ನಿರ್ಧಾರ ಘೋಷಣೆ ಮಾಡಲಿದ್ದಾರೆ.

Related Articles

- Advertisement -

Latest Articles