ಮೈಸೂರು: ಅಂಬರೀಶ್ ಅವರಿಗೆ ಮೈಸೂರು ಇಷ್ಟವಾದ ಸ್ಥಳವಾಗಿದ್ದು 3.5 ಕಿಮೀ ಉದ್ದದ ರಸ್ತೆಗೆ ʼಅಂಬರೀಶ್ʼ ಹೆಸರಿಟ್ಟಿದ್ದಾರೆ. ಅವರ ಕುಟುಂಬ ಮೈಸೂರಿನಲ್ಲಿದ್ದು, ಅಭಿಮಾನಿಗಳ ಬೇಡಿಕೆಯಿಂದ ಈ ರಸ್ತೆಗೆ ಹೆಸರು ಬಂದಿದೆ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.
ಮೈಸೂರಿನ ವಿಜಯನಗರದ ಕಾಳಿದಾಸ ರಸ್ತೆಯಿಂದ ಹೆಬ್ಬಾಳು ರಿಂಗ್ ರಸ್ತೆ ಸಂಪರ್ಕಿಸುವ 3.5 ಕಿ.ಮೀ ರಸ್ತೆಗೆ ʼಅಂಬರೀಶ್ ರಸ್ತೆʼ ಎಂದು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಮೈಸೂರು ಬೆಂಗಳೂರು ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಹೆಸರಿಡುವಂತೆ ನಾನೇ ಪತ್ರ ಬರೆದಿದ್ದೇನೆ. ಅವರ ಹೆಸರು ಸೂಕ್ತ ಎಂದು ಅಭಿಪ್ರಾಯಪಟ್ಟರು.
ನಂಗೆ ಎಲ್ಲರೂ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ. ಸ್ಫರ್ಧೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದರು. ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಲೋಕಸಭೆ ಚುನಾವಣೆ ಆಕಸ್ಮಿಕವಾಗಿ ನಡೆದಿದೆ. ಎಲ್ಲರೂ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ. ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.
ಪುತ್ರ ಚುನಾವಣೆಗೆ ಸ್ಪರ್ಧೆ ಮಾಡುವುದು ಬಿಡುವುದು ಅವನಿಗೆ ಬಿಟ್ಟ ವಿಚಾರ. ನಾನು ಚುನಾವಣೆಗೆ ಬಂದಿದ್ದೇ ಆಕಸ್ಮಿಕ. ಹಣೆ ಬರಹ ಯಾವ ರೀತಿ ಇರುತ್ತದೋ ಆ ರೀತಿ ಆಗುತ್ತದೆ ಎಂದರು.