ರಾಜಕೀಯದ ನಾಡಿಮಿಡಿತವಾಗಿ ಡಿಜಿಟಲ್ ಮಾಧ್ಯಮ ಲೋಕಕ್ಕೆ ಅಂಬೆಗಾಲಿಟ್ಟ ನಿಮ್ಮ ನೆಚ್ಚಿನ ಪೊಲಿಟಿಕಲ್-360, ಇಂದಿಗೆ ಎರಡು ವರ್ಷಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿದೆ.
ರಾಜಕೀಯವನ್ನೇ ಜೀವಾಳವಾಗಿ ಸ್ವೀಕರಿಸಿ ಬಂದ ನಮಗೆ ರಾಜಾತಿಥ್ಯ ನೀಡಿದವರು ನೀವು. ʼರಾಜಕೀಯದಿಂದ ರಾಜಕೀಯಕ್ಕಾಗಿ ರಾಜಕೀಯಕ್ಕೋಸ್ಕರ..ʼ ಎಂಬ ನಮ್ಮ ಧ್ಯೇಯಕ್ಕೆ ಬೆನ್ನೆಲುಬಾಗಿ ನಿಂತಿದ್ದು ನೀವು. ನಮ್ಮನ್ನು ಪಂಚಾಯಿತಿಯಿಂದ ಪಾರ್ಲಿಮೆಂಟ್‌ವೆರೆಗೆ ತಲುಪಿಸುತ್ತಿರುವವರೂ ನೀವು. ಈ ಸಂಭ್ರಮಕ್ಕೆ ಕಾರಣೀಭೂತರಾದ ನಿಮ್ಮೆಲ್ಲರಿಗೂ ಕೃತಜ್ಞತೆ ಹೇಳಲೇಬೇಕು ನಾವು..
ರಾಜ್ಯ-ರಾಜಕಾರಣ-ರಾಜಕಾರಣಿಗಳ ಅದೆಷ್ಟೋ ವಿಚಾರಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ತೆರೆಯಲ್ಲಿ ಕಾಣುವುದನ್ನಷ್ಟೇ ಅಲ್ಲದೆ, ಮರೆಯಲ್ಲಿರುವ ಗುಟ್ಟುಗಳನ್ನೂ ನಿಮ್ಮ ಮುಂದೆ ತೆರೆದಿಟ್ಟಿದ್ದೇವೆ. ರಾಜಕೀಯದ ಸಮಗ್ರ ಸುದ್ದಿಗಳನ್ನು ನಿಮ್ಮ ಬಳಿಗೆ ಹೊತ್ತು ತರುವ ನಮ್ಮ ಪ್ರಯತ್ನಕ್ಕೆ ಯಶಸ್ಸಿನ ಹಾದಿ ಸಿಕ್ಕಿದೆ.
ಯುಟ್ಯೂಬ್, ವೆಬ್‌ಸೈಟ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಕೈಹಿಡಿದು ನಡೆಸಿದ ನಿಮಗೆ ಮತ್ತೊಂದು ಸಿಹಿಸುದ್ದಿ ನೀಡಲು ಉತ್ಸುಕರಾಗಿದ್ದೇವೆ.
ಈವರೆಗೆ ಡಿಜಿಟಲ್ ಲೋಕದಲ್ಲಿದ್ದ ನಿಮ್ಮ ಪೊಲಿಟಿಕಲ್-360, ಇದೀಗ ನವೀನ ಹಾಗೂ ವಿಭಿನ್ನ ಆಲೋಚನೆಗಳನ್ನು ಹೊತ್ತು ದೊಡ್ಡ ಹೆಜ್ಜೆ ಇಡಲು ಸಜ್ಜಾಗಿದೆ. ಇದನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ. ನಮ್ಮ ಮುಂದಿನ ಪ್ರಯತ್ನಕ್ಕೂ ನಿಮ್ಮೆಲ್ಲರ ಬೆಂಬಲ, ಆಶೀರ್ವಾದ ಸದಾ ಇರಲಿ…