Monday, March 27, 2023
spot_img
- Advertisement -spot_img

ಇಂದು ಸ್ಯಾಂಟ್ರೋ ರವಿ ಅರೆಸ್ಟ್ ಆಗಿದ್ದಾನೆ. ನಾಳೆ ಸಿ ಟಿ ರವಿ ಅರೆಸ್ಟ್ ಆಗುತ್ತಾರೆ

ಮೈಸೂರು: ಇಂದು ಸ್ಯಾಂಟ್ರೋ ರವಿ ಅರೆಸ್ಟ್ ಆಗಿದ್ದಾನೆ. ನಾಳೆ ಸಿ ಟಿ ರವಿ ಅರೆಸ್ಟ್ ಆಗುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಸ್ಯಾಂಟ್ರೋ ರವಿಗೂ ಸಿಟಿ ರವಿಗೂ ಏನು ವ್ಯತ್ಯಾಸವಿಲ್ಲ, ನ್ಯಾಯಾಲಯದಲ್ಲಿ ಆತನ ಆಸ್ತಿ ಎಷ್ಟಿದೆ ? ಏನು ಎಂಬುದು ಗೊತ್ತಾಗಲಿದೆ. ಬಿಜೆಪಿ ವಿರುದ್ದ ಮಾತನಾಡಿದರೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ ಎಂದರು.ಹಳೇ ಮೈಸೂರು ಭಾಗದಲ್ಲಿ 20ಮಂದಿ ಸೆಳೆಯಲು ಬಿಜೆಪಿ ಪ್ಲಾನ್ ಮಾಡಿದೆ. ಈ ಪೈಕಿ ಮೈಸೂರಿನಲ್ಲಿ ಒಬ್ಬ ಹಾಗೂ ಕೋಲಾರದಲ್ಲಿ ಒಬ್ಬ ಕಾಂಗ್ರೆಸ್ ಮುಖಂಡನು ಸೇರುತ್ತಾನೆ ಎಂದು ಯೋಗೇಶ್ವರ್ ಹೇಳಿದ್ದಾರೆ.

ಮೈಸೂರು ಭಾಗದಲ್ಲಿ ಜೆಡಿಎಸ್ ಶಾಸಕ ಸಾರಾ ಮಹೇಶ್, ಅಶ್ವಿನ್ ಕುಮಾರ್ ಜೊತೆ 20 ಮಂದಿ ಸೋಲುತ್ತಾರೆ ಎಂದು ಹೇಳಿದ್ದಾರೆ. ಬಿಜೆಪಿ ಸರ್ವೆ ನಿಜಾಂಶವನ್ನು ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ ಎಂದು ಹೇಳಿದರು.ಇನ್ನು ಇದೇ ವೇಳೆ ಸಿ ಪಿ ಯೋಗೇಶ್ವರ್ ಆಡಿಯೋ ವೈರಲ್ ವಿಚಾರದ ಬಗ್ಗೆ ಪ್ರಕ್ರಿಯಿಸಿ, ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿಗೆ ಜನಾದೇಶ ಬರಲ್ಲ ಎಂದು ಯೋಗೇಶ್ವರ್ ಹೇಳಿದ್ದಾರೆ.

ಹಳೇ ಮೈಸೂರು ಪ್ರಾಂತ್ಯದಲ್ಲಿ 20ಕ್ಕೂ ಹೆಚ್ಚು ಮಂದಿ ಸೇರಿಸಿಕೊಳ್ಳುತ್ತೇವೆ ಎಂದು ಆಡಿಯೋನಲ್ಲಿ ಹೇಳಿದ್ದಾರೆ. ಅಮಿತ್ ಶಾ ಅವರೇ ಇದಕ್ಕೆಲ್ಲ ರೂವಾರಿ ಹಾಗೂ ಆತ ಒಬ್ಬ ರೌಡಿ ಎಂದು ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ಇಲ್ಲಿಯವರೆಗೂ ಬಿಜೆಪಿ ನಾಯಕರು ಯಾಕೆ ಸ್ಪಷ್ಟನೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

Related Articles

- Advertisement -

Latest Articles