ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕ ಧ್ರುವನಾರಾಯಣ ಇನ್ನಿಲ್ಲ ಎಂಬುದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ದಿವಂಗತ ಮಾಜಿ ಸಂಸದ ಧ್ರುವನಾರಾಯಣ್ ರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ರೂ ಸಹ ಸಾಮಾನ್ಯ ಕಾರ್ಯಕರ್ತರಂತಿದ್ದರು, ಸಂಘಟನೆಯಿಂದ ಬೆಳೆದು ಶಾಸಕರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ ಎಂದರು.
ನಿನ್ನೆ ಫೋನ್ ಮಾಡಿ ಧ್ರುವನಾರಾಯಣ ಜೊತೆಗೆ ಮಾತಾಡಿದ್ದೆ. ನಂಜನಗೂಡಲ್ಲಿನ ಕಾರ್ಯಕ್ರಮದ ಬಗ್ಗೆ ಚರ್ಚೆ ಆಗಿತ್ತು. ಏನೇನು ಕಾರ್ಯಕ್ರಮ ಇದೆ ಅಂತ ಧ್ರುವನಾರಾಯಣ ಬೆಳಗ್ಗೆ ಕರೆ ಮಾಡ್ತಿನಿ ಅಂದಿದ್ರು. ಆದರೆ ಅವರ ಕರೆ ನಂಗೆ ಬರಲೇ ಇಲ್ಲ ಎಂದರು.
ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕಾಂಗ್ರೆಸ್ ಗೆ ಆಸ್ತಿಯಂತಿದ್ದ ಧ್ರುವ ನಾರಾಯಣ್ ಸಾವು ಬಹುದಿನಗಳ ಕಾಲ ಪಕ್ಷವನ್ನ ಕಾಡಲಿದೆ, ಚುನಾವಣಾ ರಾಜಕೀಯದಲ್ಲಿಯೂ ಕೂಡ ದ್ವೇಷ, ಕುತಂತ್ರಗಳಿಗೆ ಅವಕಾಶ ನೀಡಲಿಲ್ಲ ಎಂದು ನುಡಿದರು.