ದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಅಶೋಕ್ ಗೆಹಲೋಟ್ ಘೋಷಣೆಯ ಬಳಿಕ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ರಾಜಕೀಯ ಸಂಚಲನ ಶುರುವಾಗಿದೆ. ಅಧ್ಯಕ್ಷ ಸ್ಥಾನಕ್ಕೇರಲು ರಾಹುಲ್ ಗಾಂಧಿ ನಿರಾಕರಿಸಿದ ಹಿನ್ನೆಲೆ ತಾವು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಅಶೋಕ್ ಗೆಹ್ಲೋಟ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಅಶೋಕ್ ಗೆಹಲೋಟ್ ಘೋಷಣೆ ಮಾಡಿದಾಗಿನಿಂದ ರಾಜಸ್ಥಾನದ ಮುಂದಿನ ಸಿಎಂ ಯಾರು ಎಂಬ ಬಗ್ಗೆ ರಾಜಸ್ಥಾನ ರಾಜಕೀಯ ರಂಗದಲ್ಲಿ ಕಾವೇರತೊಡಗಿದೆ. ಈ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಸಿಎಂ ಕುರ್ಚಿಯ ಮೇಲೆ ತಮ್ಮ ಹಕ್ಕು ಮಂಡಿಸಲು ಆರಂಭಿಸಿದ್ದಾರೆ. ಶುಕ್ರವಾರ ಪೈಲಟ್ ವಿಧಾನಸಭೆಯಲ್ಲಿ ಪಕ್ಷದ ಶಾಸಕರನ್ನು ಭೇಟಿ ಮಾಡಿದ್ದಾರೆ. ಅಶೋಕ್ ಗೆಹ್ಲೋಟ್ ಬಣದ ಶಾಸಕರಿಗೂ ಕೂಡ ಅವರು ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿನ್ ಪೈಲಟ್ ಸೆಪ್ಟೆಂಬರ್ 20 ರಂದು ಕೊಚ್ಚಿಗೆ ಹೋಗಿದ್ದರು ಮತ್ತು ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರ ನಡುವೆ ಕೆಲ ಮಹತ್ವದ ಚರ್ಚೆಗಳೂ ಕೂಡ ನಡೆದಿವೆ ಎಂದು ಹೇಳಲಾಗುತ್ತಿದೆ. ಪೈಲಟ್ ಸೋನಿಯಾ ಗಾಂಧಿ ಭೇಟಿಗಾಗಿ ಅಪಾಯಿಂಟ್‌ಮೆಂಟ್ ಕೇಳಿದ್ದಾರೆ ಎನ್ನಲಾಗಿದೆ. ಆದ್ರೆ ಒಂದು ವೇಳೆ ಎಲೆಕ್ಷನ್ ನಲ್ಲಿ ಗೆದ್ದರೆ ತೆರವಾಗಲಿರುವ ರಾಜಸ್ಥಾನ ಸಿಎಂ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ? ಎಂದು ಸೋನಿಯಾ ಗಾಂಧಿ ತೀರ್ಮಾನಿಸಲಿದ್ದಾರೆ ಎಂದು ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಮೂಲಗಳ ಮಾಹಿತಿ ಪ್ರಕಾರ , ಅಶೋಕ್ ಗೆಹಲೋಟ್ , ಸಚಿನ್ ಪೈಲಟ್‌ರನ್ನು ಇಷ್ಟಪಡುವುದಿಲ್ವಂತೆ. ಗೆಹಲೋಟ್ ತಮ್ಮ ಬಣದ ಹಿರಿಯ ನಾಯಕರು ರಾಜಸ್ಥಾನದ ಸಿಎಂ ಆಗ್ಬೇಕೆಂದು ಬಯಸುತ್ತಿದ್ದಾರೆ. ಡಾ.ಸಿ.ಪಿ.ಜೋಶಿ, ಬಿ.ಡಿ.ಕಲ್ಲಾ ಮತ್ತು ಗೋವಿಂದ್ ಸಿಂಗ್ ದೋಟಸಾರ ಇವರಲ್ಲಿ ಯಾರನ್ನಾದರು ಒಬ್ಬರನ್ನು ಸಿಎಂ ಮಾಡಲು ಗೆಹಲೋಟ್ ಒಲವು ತೋರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.