ನವದೆಹಲಿ: ಇಸೋದ ಚಂದ್ರಯಾನ್-3 ಯೋಜನೆ ತನ್ನ ಗುರಿ ತಲುಪಿದ್ದು, ಚಂದ್ರನ ಮೇಲೆ ರೋವರ್ ತನ್ನ ಕಾರ್ಯಾಚರಣೆ ಆರಂಭಿಸಿದೆ. ಈ ನಡುವೆ ಚಂದ್ರಯಾನ್ ಯೋಜನೆಯ ಎರಡು ಉದ್ದೇಶಗಳು ಈಡೇರಿದ್ದು, ಮೂರನೇ ಉದ್ದೇಶ ಪ್ರಗತಿಯಲ್ಲಿದೆ ಎಂದು ಇಸ್ರೋ ಮಾಹಿತಿ ಹಂಚಿಕೊಂಡಿದೆ.
ಮೂರು ಉದ್ದೇಶಗಳಲ್ಲಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್, ರೋವರ್ ಕಾರ್ಯಾಚರಣೆ ಆರಂಭಿಸುವಂತೆ ಮಾಡುವುದು ಈಗಾಗಲೇ ಈಡೇರಿದೆ. ಮೂರನೇ ಉದ್ದೇಶವಾದ ಚಂದ್ರನ ವೈಜ್ಞಾನಿಕ ಅಧ್ಯಯನ ಪ್ರಗತಿಯಲ್ಲಿದೆ ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ: ಹಾಲಿವುಡ್ ಸಿನಿಮಾಗಿಂತ ಕಡಿಮೆ ಬಜೆಟ್‌ನಲ್ಲಿ ಚಂದ್ರಲೋಕ ತಲುಪಿದ್ದೇವೆ: ಕೇಂದ್ರ ಸಚಿವ
ಕಳೆದ ಬುಧವಾರ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ್-3 ಲ್ಯಾಂಡರ್ ಮಾಡ್ಯೂಲ್ (LM) ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿ ಇತಿಹಾಸ ಬರೆದಿದೆ. ಚಂದ್ರನ ದಕ್ಷಿಣ ಧ್ರುವ ತಲುಪಿದ ಏಕೈಕ ಹಾಗೂ ಮೊದಲ ರಾಷ್ಟ್ರವಾಗಿದೆ. ಇದಾದ ಬಳಿಕ ಪ್ರಧಾನಿ ಮೋದಿ ನಿನ್ನೆ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳ ಸಾಧನೆ ಹೊಗಳಿದ್ರು. ಬಳಿಕ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಘೋಷಣೆ ಮಾಡಿದರು.
ಇದನ್ನೂ ಓದಿ: ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ; ಶಾಲೆ ದ್ವೇಷದ ಮಾರುಕಟ್ಟೆ ಆಗ್ತಿದೆ ಎಂದ ರಾಹುಲ್
ಇದರ ಜೊತೆಗೆ ಚಂದ್ರಯಾನ -2 ಕ್ರ್ಯಾಶ್-ಲ್ಯಾಂಡ್ ಆಗಿದ್ದ ಸ್ಥಳವನ್ನು’ತಿರಂಗಾ ಪಾಯಿಂಟ್’ ಎಂದು ಕರೆಯುವುದಾಗಿ ಮೋದಿ ಘೋಷಿಸಿದರು. ಅಲ್ಲದೆ ಚಂದ್ರಯಾನ್-3 ಚಂದ್ರನ ತಲುಪಿದ ದಿನವಾದ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲಾಗುವುದು ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.