ಮಂಗಳೂರು: ಕೊಲೆ ಘಟನೆಗಳಿಗೆ ಪ್ರೇರಣೆ ಕೊಡುವ ಹೇಳಿಕೆ ಸಮಾಜಕ್ಕೆ ಅತ್ಯಂತ ಅಪಾಯಕಾರಿ. ಈ ರೀತಿಯ ಹೇಳಿಕೆ ಕೊಡುವವರನ್ನು ಗಡಿಪಾರು ಮಾಡಿ ಎಂದು ಶಾಸಕ ಹಾಗೂ ವಿಧಾನಸಭಾ ಸಭಾ ವಿಪಕ್ಷ ನಾಯಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ದ್ವೇಷದ ಹೇಳಿಕೆ ನೀಡಿದ್ದಾರೆ. ಉಳ್ಳಾಲದಲ್ಲಿ ಜನ ಸೌಹಾರ್ದತೆಯಿಂದ ಇದ್ದಾರೆ. ಕೋಮುವಾದಿ ಶಕ್ತಿಗಳಿಗೆ ಜನ ಅವಕಾಶ ಕೊಡಲ್ಲ. ಹಿಂದೂ ಆಗಲೀ, ಮುಸ್ಲಿಂ ಆಗಲೀ ಯಾಕೆ ಕೊಲೆಯಾಗಬೇಕು ಕೊಲೆಯಾಗಬೇಕೆಂದು ಬಿಜೆಪಿ ಯವರು ಕಾಯುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ಲಾಭ, ವ್ಯಾಪಾರಕ್ಕಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅವಿಶ್ವಾಸ, ದ್ವೇಷ, ಕೊಲೆ, ಅಹಿತಕರ ಘಟನೆಗಳಿಗೆ ಕಾರಣರಾಗುವ ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಇಲ್ಲಿನ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಚುನಾವಣೆಗೋಸ್ಕರ, ಮಾಧ್ಯಮದಲ್ಲಿ ಬಿಲ್ಡಪ್ ಸಿಗತ್ತೆ ಅಂತ ಹೇಳಿಕೆ ಕೊಡುತ್ತಾರೆ. ಇವರ ಹೇಳಿಕೆಯಿಂದ ಜನರಲ್ಲಿ ಭಯ ಶುರುವಾಗಿದೆ. ಯಾಕೆ ಇಂಥವರನ್ನು ಸಮಾಜ ಹೊತ್ತುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಹಿಂದೂಗಳು ಶಕ್ತಿ ಹೀನರಲ್ಲ. ಏಟಿಗೆ ಎದುರೇಟು ಕೊಟ್ಟಿರುವ ಹಲವಾರು ಉದಾಹರಣೆಗಳು ಇವೆ ಎಂದಿದ್ದರು. ಅಲ್ಲದೇ 59 ಜನ ಕರಸೇವಕರು ಪ್ರಯಾಣಿಸುತಿದ್ದ ರೈಲಿಗೆ ಬೆಂಕಿಹಾಕಿ ಅವರನ್ನು ಜೀವಂತ ಸುಡಲಾಗಿತ್ತು. ಅದಕ್ಕೆ ಪ್ರತಿಕಾರ ಎಂಬಂತೆ ಗುಜರಾತ್ ಗಲಭೆ ನಡೆಯಿತು. ಇದು ಹಿಂದೂಗಳ ಶೌರ್ಯದ ಪ್ರತೀಕ ಎಂದು ವಿವಾದಾತ್ಮಕ ಭಾಷಣ ಮಾಡಿದ್ದರು.