ಬೆಂಗಳೂರು: ಸಚಿವ ಸ್ಥಾನದಿಂದ ಉದಯನಿಧಿ ಸ್ಟಾಲಿನ್ ಅವರನ್ನು ವಜಾ ಮಾಡಬೇಕು, ಇಂಡಿಯಾ ಒಕ್ಕೂಟದಿಂದ ಡಿಎಂಕೆಯನ್ನು ಕೈಬಿಡಬೇಕು ಎಂದು ಎಂಎಲ್‌ಸಿ ಎನ್ ರವಿಕುಮಾರ್ ಹೇಳಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಸಮಾನತೆಗಳಿರಬಹುದು ಆದ್ರೆ ನಿರ್ಮೂಲನೆ ಮಾಡಿ, ನಾಶ ಮಾಡಿ ಅನ್ನೋ ಹೇಳಿಕೆ ಸರಿಯಲ್ಲ. ನಿಮ್ಮ ತಾತ, ನಿಮ್ಮ ಅಪ್ಪ ಸಿಎಂ ಆದವರು, ನೀವು ಮಂತ್ರಿಯಾದವರು. ಇದು ಅಸಮಾನತೆ ಅಲ್ವಾ, ಬೇರೆಯವರಿಗೆ ಅವಕಾಶ ಕೊಟ್ಟು ಅಸಮಾನತೆ ದೂರ ಮಾಡಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಕಾವೇರಿ ಜಲ ವಿವಾದ : ಒನಕೆ ಹಿಡಿದು ಬೀದಿಗಿಳಿದ ಮಹಿಳೆಯರು
ಅಸಮಾನತೆ ದೂರ ಮಾಡೋದಕ್ಕೆ ನೀವು ಏನೆಲ್ಲಾ ಕೊಡುಗೆ ಕೊಟ್ಟಿದ್ದೀರಾ ಅನ್ನೋದನ್ನ ಹೇಳಿ, ನಿಮ್ಮ ಕೊಡುಗೆ ಏನಿದೆ? ಅದನ್ನು ಬಿಟ್ಟು ಬೇರೆ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಾನು ಇಂಡಿಯಾ ಒಕ್ಕೂಟಕ್ಕೆ ಪ್ರಶ್ನೆ ಮಾಡುತ್ತೇನೆ. ಇದು ಇಂಡಿಯಾ ಒಕ್ಕೂಟದ ನಿಲುವಾ? ಈ ರೀತಿಯ ಹೇಳಿಕೆ ಕೊಟ್ಟ ಡಿಎಂಕೆ ಪಕ್ಷವನ್ನು ನೀವು ಒಕ್ಕೂಟದಿಂದ ಕೈಬಿಡಬೇಕು. ಇಲ್ಲವೇ ಹಿಂದುತ್ವದ ವಿಚಾರದಲ್ಲಿ ನಿಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು. ಈ ರೀತಿ ಹೇಳಿಕೆಗಳ ಕೊಡುತ್ತಿದ್ದರೆ ಜನರೇ ನಿಮಗೆ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.