ಕಲಬುರಗಿ : ಉದಯ ನಿಧಿ ಸ್ಟಾಲಿನ್ ಹಿಂದೂ ಧರ್ಮ ಕೆಟ್ಟದು ಅಂತ ಎಲ್ಲೂ ಹೇಳಿಲ್ಲ, ಧರ್ಮದ ಅವಹೇಳನ ಎಲ್ಲಿ ಮಾಡಿದ್ದಾರೆ? ಹಿಂದೂ ಧರ್ಮದ ಹೆಸರಿನಲ್ಲಿ ಮನಸ್ಸು ಪೂರ್ತಿ ಜಾತಿ ವ್ಯವಸ್ಥೆ ಹಾಳಾಗಿರೋ ವಿಚಾರವಾಗಿ ಹೇಳಿದ್ದಾರೆ ಎಂದು ಶಾಸಕ ಬಸವರಾಜ ರಾಯ ರೆಡ್ಡಿ ಸ್ಟಾಲಿನ್ ಹೇಳಿಕೆ ಸಮರ್ಥಿಸಿಕೊಂಡರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಾನತೆ ಉದ್ದೇಶದಿಂದ ಉದಯ ನಿಧಿ ಸ್ಟಾಲಿನ್ ಮಾತನಾಡಿರಬಹುದು ಎಂದರು. ಇನ್ನೂ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಖಾಸಗಿ ವಾಹನ ಚಾಲಕರಿಗೆ ತೊಂದರೆ ಆಗುತ್ತಿದೆ, ಯೋಜನೆಗಳನ್ನು ರದ್ದು ಮಾಡೋಕೆ ಸಾಧ್ಯನಾ? ಎಂದು ಪ್ರಶ್ನಿಸಿದರು.
ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತವಾಗಿ ಸಾರಿಗೆ ವ್ಯವಸ್ಥೆ ಮಾಡಿದ್ದು ತಪ್ಪಲ್ಲ, ಖಾಸಗಿ ವಾಹನ ಚಾಲಕರಿಗೆ ತೊಂದರೆ ಆದ್ರೆ ಸಿಎಂ ಪರ್ಯಾಯ ವ್ಯವಸ್ಥೆ ಮಾಡ್ತಾರೆ, ಕಲ್ಯಾಣ ಕಾರ್ಯಗಳು ನಡೆಯುವಾಗ ಎಲ್ಲಿಯೂ ಕಾಣದ ಶಕ್ತಿಗಳು ಅಡ್ಡಿಮಾಡುತ್ತವೆ, ಧರ್ಮ ಜಾತಿ ಹೆಸರಿನಲ್ಲಿ ರಾಜಕೀಯ ಮಾಡೋರು ಇರ್ತಾರೆ, ಇಂಥವರು ಕಾಂಗ್ರೆಸ್ ನೀಡುತ್ತಿರುವ ಯೋಜನೆಗಳ ಬಗ್ಗೆ ಮಾತನಾಡೋದು ಸರಿಯಲ್ಲ , ನಮ್ಮ ದೇಶದಲ್ಲಿ ನಡೆಯುತ್ತಿರುವ ಧರ್ಮ ಜಾತಿಯ ವಿಚಾರಗಳು ಸರಿಯಲ್ಲ, ಪ್ರಿಯಾಂಕ್ ಖರ್ಗೆ ಮೇಲೆ ಎಫ್ಐಆರ್ ಮಾಡುವ ವಿಚಾರವೂ ಸರಿ ಇಲ್ಲ ಎಂದರು.
ಇದನ್ನೂ ಓದಿ: ನೆದರ್ ಲ್ಯಾಂಡ್ ಪ್ರಧಾನಿ ಸ್ವಾಗತಿಸಿದ ಡಿಕೆ ಶಿವಕುಮಾರ್
ಕಾಂಗ್ರೆಸ್ ಒಳ ಜಗಳ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯನವರು ಒಬ್ಬ ಗುಡ್ ಅಡ್ಮಿಸ್ಟ್ರೇಟಿವ್ ಅವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ಪರಿಕಲ್ಪನೆ ಇದೆ ಇಂತಹ ವಿಚಾರ ನಿರ್ಲಕ್ಷಿಸೋದೇ ಒಳ್ಳೆದು ಎಂದು ಅಭಿಪ್ರಾಯಪಟ್ಟರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.