ಬೆಂಗಳೂರು: ಉದಯ್ ನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಮಲೇರಿಯಾಗೆ ಹೋಲಿಸಿದ್ದಾರೆ,
ಉದಯನಿಧಿ ಸ್ಟಾಲಿನ್ ಅರೆ ಹುಚ್ಚರಾಗಿದ್ದಾರೆ ಎಂದು ಪರಿಷತ್ ಸದಸ್ಯ ಎನ್. ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಉದಯ್ ನಿಧಿ ಹೇಳಿಕೆ ಕುರಿತು ಆಕ್ರೋಶ ಹೊರಹಾಕಿದ್ದಾರೆ.
ಸನಾತನ ಧರ್ಮ ಇದ್ದಿದ್ದರಿಂದಲೇ ಕೋವಿಡ್ ದೇಶದಿಂದ ಮಾಯವಾಯ್ತು, ಸನಾತನ ಧರ್ಮದಿಂದಲೇ ಮತಾಂತರ ಪ್ರಮಾಣ ಕಡಿಮೆ ಆಗಿದೆ. ಉದಯ್ ನಿಧಿ ಸ್ಟಾಲಿನ್ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಅವರನ್ನು ಶೀಘ್ರ ನಿಮ್ಹಾನ್ಸ್‌ಗೆ ಸೇರಿಸಬೇಕು. ಸಂಪುಟದಿಂದ ತಕ್ಷಣ ವಜಾ ಮಾಡಬೇಕು. ಇಂತವರಿಗೆ ಜನ ತಕ್ಕ ಪಾಠ ಕಲಿಸಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಲೋಕಸಭೆಗೆ ಸ್ಪರ್ಧೆ ಬಗ್ಗೆ ಸಮಯ ಬಂದಾಗ ತಿಳಿಸುವೆ: ತೇಜಸ್ವಿನಿ ಅನಂತಕುಮಾರ್
ಯಾರೂ ಬಿಜೆಪಿ ಬಿಡಲ್ಲ!
ಬಿಜೆಪಿ ಬಿಟ್ಟು ಯಾರು ಹೋಗುವುದಿಲ್ಲ. ನಟ ಸುದೀಪ್ ಬರ್ತ್ ಡೇ ಪಾರ್ಟಿಯಲ್ಲಿ ಆಕಸ್ಮಿಕವಾಗಿ ಬಿ.ಸಿ ಪಾಟೀಲ್, ರಾಜುಗೌಡ, ಡಿ.ಕೆ ಶಿವಕುಮಾರ್ ಅವರಿಗೆ ಸಿಕ್ಕಿದ್ದಾರೆ. ನನಗೂ ಅವರಿಬ್ಬರೂ ಇಂದು ಸಿಕ್ಕಿದ್ದಾರೆ. ಅವರೇನು ಬಿಜೆಪಿ ಬಿಡಲ್ಲ, ಇದರಲ್ಲಿ ಅನುಮಾನ ಮಾಡುವುದು ಬೇಡ ಎಂದಿದ್ದಾರೆ.
ರೇಣುಕಾಚಾರ್ಯ ಅಸಮಾಧಾನ ಸಂಬಂಧ ಮಾತನಾಡಿದ ಅವರು, ‘ರೇಣುಕಾಚಾರ್ಯ ಅವರ ಬಳಿ ನಮ್ಮ ನಾಯಕರಾದ ಯಡಿಯೂರಪ್ಪ ಮಾತಾಡ್ತಾರೆ, ಪಕ್ಷದಿಂದಲೂ ರೇಣುಕಾಚಾರ್ಯ ಅವರ ಹೇಳಿಕೆಗೆ ಸ್ಪಷ್ಟನೆ ಪಡೆಯಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತೆ’ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.