ಹಿಂಗೋಲಿ (ಮಹಾರಾಷ್ಟ್ರ) : ಶಿವಸೇನೆ (ಯುಟಿಬಿ) ನಾಯಕ ಉದ್ಧವ್ ಠಾಕ್ರೆ ಎನ್ಡಿಎ ಮೈತ್ರಿಕೂಟವನ್ನು ಅಮಿಬಾಗೆ ಹೋಲಿಸಿದ್ದು, ಆ ಮೈತ್ರಿಕೂಟಕ್ಕೆ ನಿರ್ದಿಷ್ಟ ಆಕಾರ, ಗಾತ್ರ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ಘಮಾಂಡಿಯ (ಅಹಂಕಾರಿ), ಇಂಡಿಯನ್ ಮುಜಾಹಿದ್ದೀನ್ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತೆಲಂಗಾಣ ಸಿಎಂ ಕೆಸಿಆರ್ ವಿರುದ್ಧ ಕಿಡಿಕಾರಿದ ಠಾಕ್ರೆ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರು ಇಂಡಿಯಾ ಮೈತ್ರಿಕೂಟ ಬೆಂಬಲಿಸುತ್ತಿದ್ದಾರಾ, ಇಲ್ಲ ಎನ್ಡಿಎ ಮೈತ್ರಿಕೂಟ ಬೆಂಬಲಿಸುತ್ತಿದ್ದಾರಾ? ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದರು.
ಇದನ್ನೂ ಓದಿ : ಕಾಂಗ್ರೆಸ್ ನಾಲ್ಕು ತಲೆಮಾರಿನ 4ಜಿ ಪಕ್ಷ: ಅಮಿತ್ ಶಾ
ಇಂಡಿಯಾ ಒಕ್ಕೂಟದ ರಾಷ್ಟ್ರೀಯತಾವಾದಿ ಪಕ್ಷಗಳು ಒಳಗೊಂಡಿವೆ. ಆದರೆ, ಎನ್ಡಿಎ ಒಕ್ಕೂಟ ಇತರ ಪಕ್ಷಗಳನ್ನು ಮುರಿದು ಬಂದಿರುವ ದೇಶದ್ರೋಹಿಗಳನ್ನು ಒಳಗೊಂಡಿವೆ ಎಂದು ಠಾಕ್ರೆ ಹೇಳಿದರು. ನೀವು ದೇಶದೊಂದಿಗಿದ್ದರೆ ಇಂಡಿಯಾ ಮೈತ್ರಿಕೂಟಕ್ಕೆ ಸೇರಿಕೊಳ್ಳಿ. ಬಿಜೆಪಿ ಜೊತೆಗಿದ್ದರೆ ನಿಮ್ಮ ಮೈತ್ರಿಯನ್ನು ಬಹಿರಂಗವಾಗಿ ಘೋಷಿಸಿ. ಮತಗಳನ್ನು ವಿಭಜಿಸಬೇಡಿ ಎಂದು ಕೆಸಿಆರ್ ವಿರುದ್ಧ ಠಾಕ್ರೆ ಕಿಡಿಕಾರಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.