ಚೆನ್ನೈ: ಸನಾತನ ಧರ್ಮ ಕುರಿತು ಟೀಕಿಸಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿಯನ್ನು ‘ವಿಷಕಾರಿ ಹಾವು’ ಎಂದು ಟೀಕಿಸಿದ್ದಾರೆ. ತಮಿಳುನಾಡಿನ ನೇವೇಲಿಯಲ್ಲಿ ಭಾನುವಾರ ನಡೆದ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಜೊತೆ ತಮಿಳುನಾಡಿನ ವಿರೋಧ ಪಕ್ಷವಾದ ಎಐಎಡಿಎಂಕೆ ವಿರುದ್ಧವೂ ಕಿಡಿಕಾರಿದ್ದಾರೆ. ಎಐಎಡಿಎಂಕೆ ಹಾವುಗಳಿಗೆ ಆಶ್ರಯ ನೀಡುವ ಕಸ ಎಂದಿದ್ದಾರೆ. ನಿಮ್ಮ ಮನೆಗೆ ವಿಷಪೂರಿತ ಹಾವು ಬಂದರೆ ಅದನ್ನು ಹೊರಗೆಸೆದರೆ ಸಾಕಾಗುವುದಿಲ್ಲ ಏಕೆಂದರೆ ಅದು ನಿಮ್ಮ ಮನೆಯ ಸಮೀಪವಿರುವ ಕಸದಲ್ಲಿ ಅಡಗಿಕೊಳ್ಳುತ್ತದೆ, ನೀವು ಪೊದೆಗಳನ್ನು ತೆರವುಗೊಳಿಸದ ಹೊರತು ಹಾವು ನಿಮ್ಮ ಮನೆಗೆ ಮರಳುತ್ತಲೇ ಇರುತ್ತದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ: Special parliament Session : ವಿಶೇಷ ಅಧಿವೇಶನದಲ್ಲಿ ಈ ಎರಡು ಮಸೂದೆ ಮಂಡನೆ ಸಾಧ್ಯತೆ
‘ಈಗಿನ ಪರಿಸ್ಥಿತಿಗೆ ಹೋಲಿಸಿದರೆ, ತಮಿಳುನಾಡನ್ನು ನಮ್ಮ ಮನೆ, ವಿಷಕಾರಿ ಹಾವನ್ನು ಬಿಜೆಪಿ, ಮತ್ತು ನಮ್ಮ ಮನೆಯ ಸಮೀಪವಿರುವ ಕಸವನ್ನು ಎಐಎಡಿಎಂಕೆ ಎಂದು ನಾನು ಪರಿಗಣಿಸುತ್ತೇನೆ, ನೀವು ಕಸವನ್ನು ತೆರವುಗೊಳಿಸದ ಹೊರತು ನೀವು ಉಳಿಸಿಕೊಳ್ಳಲು ಸಾಧ್ಯವಿಲ್ಲ. ವಿಷಕಾರಿ ಹಾವು ದೂರ ಮಾಡಲು ಮೊದಲು ಎಐಎಡಿಎಂಕೆಯನ್ನು ತೊಡೆದುಹಾಕಬೇಕು’ ಎಂದಿದ್ದಾರೆ.
ತಮ್ಮ ಸನಾತನ ಧರ್ಮದ ಹೇಳಿಕೆಯ ಕುರಿತು ಮಾತನಾಡಿದ ಉದಯನಿಧಿ ಸ್ಟಾಲಿನ್, ತಮ್ಮ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ನರಮೇಧಕ್ಕೆ ಕರೆ ಕೊಟ್ಟಿರುವುದಾಗಿ ತಪ್ಪಾಗಿ ಚಿತ್ರಿಸಲಾಗಿದೆ ಎಂದು ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬದಂದು ‘ಆಯುಷ್ಮಾನ್ ಭವ’ ಅಭಿಯಾನ!
‘ನನ್ನ ಮಾತುಗಳನ್ನು ತಿರುಚಲಾಗಿದೆ ಮತ್ತು ನಾನು ನರಮೇಧಕ್ಕೆ ಕರೆ ನೀಡಿದ್ದೇನೆ ಎಂದು ಸುಳ್ಳು ಹೇಳಲಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಳೆದ ಐದು ತಿಂಗಳಿನಿಂದ ಬಿಜೆಪಿ ಆಡಳಿತ ನಡೆಸುತ್ತಿರುವ ಮಣಿಪುರದಲ್ಲಿ ನರಮೇಧ ನಡೆಯುತ್ತಿದೆ, ನೂರಾರು ಜನರು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.