ಉಡುಪಿ : ನಾನು ಬೆಂಗಳೂರಿನಲ್ಲಿ ಕೂತು ರಾಜಕೀಯ ಮಾಡಿದವನಲ್ಲ, ಈ ಬಾರಿ ಹೈಕಮಾಂಡ್ ಟಿಕೇಟ್ ನೀಡುತ್ತದೆ, ನನಗೆ ಪಕ್ಷ ಮತ್ತು ನಾಯಕರ ಮೇಲೆ ವಿಶ್ವಾಸ ಇದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ನಾಯಕತ್ವದಲ್ಲೇ ಸ್ಥಳೀಯ ಚುನಾವಣೆ ಗೆದ್ದಿದ್ದೇವೆ 19ರ ಪೈಕಿ 15 ಪಂಚಾಯತಿಗಳಲ್ಲಿ ಬಿಜೆಪಿ ಆಡಳಿತ ಬಂದಿದೆ ,ನಾನು ಮೂರು ಬಾರಿ ಉಡುಪಿಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದು ಯಾವತ್ತೂ ಚುನಾವಣೆಯಲ್ಲಿ ನಿಂತು ಸೋತ ಅಭ್ಯರ್ಥಿ ಅಲ್ಲ. ನಾನು ಶಾಸಕನಾದ ಮೇಲೆ ಉಡುಪಿ ನಗರಸಭೆಯಲ್ಲಿ 35 ರಲ್ಲಿ 31 ಸ್ಥಾನ ಗೆದ್ದಿದ್ದೇವೆ. ನಾನು 94 ರಿಂದ ಸ್ಥಾನಿಯ ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಅಭಿಪ್ರಾಯಪಟ್ಟರು.
ನಾನು ಆಕಸ್ಮಿಕವಾಗಿ ರಾಜಕೀಯ ಬಂದವನಲ್ಲ ಪಕ್ಷದ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಬಂದಿದ್ದೇನೆ. ನನಗೆ ಟಿಕೆಟ್ ಆಗುತ್ತೆ ಎಂದು ಹೇಳಿಕೊಂಡು ತಿರುಗುವಷ್ಟು ಮೂರ್ಖನು ನಾನಲ್ಲ. ಟಿಕೇಟ್ ಹಂಚಿಕೆ ಕುರಿತು ಪಕ್ಷದ ಪಾರ್ಲಿಮೆಂಟರಿ ಬೋರ್ಡ್ ನಲ್ಲಿ ತೀರ್ಮಾನ ಆಗುತ್ತದೆ ಎಂದರು.
ಲೋಕಸಭೆಗೆ ನಾನು ಹೋಗೋದೇ ಇಲ್ಲ, ಅಷ್ಟು ಶಕ್ತಿಯೂ ನನ್ನಲಿಲ್ಲ ಆದರೆ ವಿಧಾನಸಭೆಗೆ ಕಷ್ಟದಲ್ಲಿ ಹೋಗಿ ನಾನು ಗೆಲ್ತಾ ಇದ್ದೇನೆ. ಪಕ್ಷ ಅವಕಾಶ ಕೊಟ್ಟರೆ ನಾನು ಉಡುಪಿ ವಿಧಾನಸಭಾ ಕ್ಷೇತ್ರದಿಂದಲೇ ನಿಲ್ಲುತ್ತೇನೆ ಎಂದರು. ತನ್ನ ಶಾಸಕತ್ವದ ಅವಧಿಯಲ್ಲಿ ಹಿಜಾಬ್ ವಿಚಾರ ಪ್ರಸ್ತಾಪ ಆಗಿದ್ದು ಈ ವಿಚಾರವನ್ನು ನಿಯಂತ್ರಿಸಿದ ವಿಚಾರದಲ್ಲಿ ನನಗೆ ಸಮಾಧಾನ ಇದೆ ಎಂದರು.