ಕಲಬುರಗಿ : ಸನಾತನ ಧರ್ಮ, ಡೆಂಘ್ಯೂ, ಮಲೇರಿಯಾ ಇದ್ದಹಾಗೆ ಇದನ್ನ ಬೇರು ಸಮೇತ ಕಿತ್ತೊಗೆಯಬೇಕು ಎಂದು ಉದಯನಿಧಿ ಆಘಾತಕಾರಿ ಹೇಳಿಕೆ ಕೊಟ್ಟಿದ್ದಾರೆ, ಸಂವಿಧಾನದ ವಿರುದ್ದ ಮಾತಾಡಿದ್ದಾರೆ ಎಂದು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಆಕ್ರೋಶಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದೇಶದಲ್ಲಿ ಗೊಂದಲದ ಸ್ಥಿತಿ ನಿರ್ಮಾಣಗೊಂಡಿದ್ದು, ಅವರ ಹೇಳಿಕೆ ನಮಗೆಲ್ಲ ತುಂಬಾ ನೋವಾಗಿದೆ, ಅಷ್ಟೇ ಅಲ್ಲದೇ ಉದಯನಿಧಿ ಬೆಂಬಲಿಸಿದ ಪ್ರಿಯಾಂಕ್ ಖರ್ಗೆಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬಿಜೆಪಿ ಸ್ನೇಹಿತರು ಡೆಲ್ಲಿಗೆ ತೆರಳಿ ಮೇಕೆದಾಟು ತರಲು ಒತ್ತಡ ಹಾಕಲಿ; ಡಿಕೆಶಿ
ಬೇರೆ ಬೇರೆ ಪಕ್ಷದವರು ಇಂಡಿಯಾ ಘಟಬಂಧನದವರು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುವ ಮೂಲಕ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ, ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು, ಜೊತೆಗೆ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ದೊಡ್ಡ ಖರ್ಗೆ ಸ್ಪಷ್ಟನೆ ನೀಡಲಿ, ಎಐಸಿಸಿ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ ಅವರು ಇದರ ಬಗ್ಗೆ ಮಾತಾಡಬೇಕು, ಅವರ ನಿಲುವು ಸ್ಪಷ್ಟಪಡಿಸಬೇಕು, ಇಡೀ ಭಾರತೀಯರಿಗೆ ಸನಾತನ ಧರ್ಮದ ಬಗ್ಗೆ ಮಾತಾಡಿರೋದು ನೋವಾಗಿದೆ… ಬೇರೆ ಧರ್ಮ ಬಗ್ಗೆ ಮಾತಾಡಿದ್ರೆ ಇವತ್ತು ಗಲಭೆಯೆ ಸೃಷ್ಟಿಯಾಗುತ್ತಿತ್ತು ಎಂದು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.