ವಿಜಯನಗರ: ರಾಜರ ಕಾಲದಲ್ಲಿ ಬೀದಿ ಬದಿಯಲ್ಲಿ ಮುತ್ತು, ರತ್ನ, ವಜ್ರ ವೈಢೂರ್ಯಗಳನ್ನು ಸೇರುಗಳಲ್ಲಿಅಳೆದು ಮಾರಾಟ ಮಾಡುತ್ತಿದ್ದ ವಿಶ್ವವಿಖ್ಯಾತ ಹಂಪಿಯಲ್ಲಿ ಕಳೆದ ಬಿಜೆಪಿ ಸರ್ಕಾರದ ಸಂದರ್ಭದಲ್ಲಿ ಶುರುವಾದ ಕಾಮಗಾರಿ ಇನ್ನು ಮುಗಿದಿಲ್ಲ. ಇದರಿಂದ ಹಂಪಿಗೆ ಬರುವ ಪ್ರವಾಸಿಗರು ಬಾರಿ ತೊಂದರೆ ಅನುಭವಿಸುವಂತಾಗಿದೆ.
ಬಿಜೆಪಿ ಸರ್ಕಾರ ಅವಧಿಯ ಸಂದರ್ಭದಲ್ಲಿ ಹದಿನೇಳುವರೆ ಕೋಟಿ ವೆಚ್ಚದಲ್ಲಿ ಹಂಪಿಯ ಕಾಮಗಾರಿ ನಡೆಸಲು ತೀರ್ಮಾನ ಮಾಡಲಾಗಿತ್ತು. ಅಂತೆಯೇ ಕಾಮಗಾರಿಯನ್ನು ಪ್ರಾರಂಭ ಕೂಡ ಮಾಡಲಾಗಿತ್ತು. ಆದರೆ ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸದಿಂದ ದೇಶ, ವಿದೇಶಗಳಿಂದ ಆಗಮಿಸುತ್ತಿರುವ ಯಾತ್ರಾರ್ಥಿಗಳಿಗೆ ಹಂಪಿಯ ಸ್ನಾನಘಟ್ಟದಲ್ಲಿ ಕನಿಷ್ಠ ಮೂಲಸೌಕರ್ಯವನ್ನು ಕೂಡ ಒದಗಿಸಿಲ್ಲ.
ಇದನ್ನೂ ಓದಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಭೇಟಿಯಾದ ಕೇಂದ್ರ ಸಚಿವ ಪಿಯೂಶ್ ಗೋಯಲ್
ವಿಶ್ವವಿಖ್ಯಾತ ಹಂಪಿಯ ಸ್ನಾನಘಟ್ಟ ಕಾಮಗಾರಿ ಪ್ರಾರಂಭವಾಗಿ ಒಂದು ವರ್ಷವಾಗಿದೆ. ಪುಣ್ಯ ಸ್ನಾನಕ್ಕೆಂದು ಆಗಮಿಸುವ ಮಹಿಳಾ ಭಕ್ತಾದಿಗಳು ಹಂಪಿಯ ಸ್ನಾನಘಟ್ಟದ ಬಳಿಯೆ ಬಟ್ಟೆ ಬದಲಾಯಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ಇರಸು ಮರುಸು ಪಟ್ಟುಕೊಳ್ಳುವಂತಾಗಿದೆ. ಈ ಬಗ್ಗೆ ಕಣ್ಮುಚ್ಚಿ ಕುಳಿತಿದಿಯಾ ಜಿಲ್ಲಾಡಳಿತ ಎಂಬ ಪ್ರಶ್ನೆ ಮೂಡಿದೆ.
ಯುನೆಸ್ಕೊ ಹಂಪಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಘೋಷಣೆ ಮಾಡಿದೆ. ಈ ಹಿಂದೆ ನವದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಕರ್ನಾಟಕ ಇತಿಹಾಸವನ್ನು ವಿವರಿಸುವ ಸಂದರ್ಭದಲ್ಲಿ ಹಂಪಿಯನ್ನು ಮುಖ್ಯ ಪಾತ್ರದಲ್ಲಿ ಇರಿಸಲಾಗಿತ್ತು. ಕರ್ನಾಟಕ ಹಿರಿಮೆಯನ್ನು ಸಾರುವ ಹಾಗೂ ದೇಶದ ಇತಿಹಾಸದಲ್ಲೇ ಪ್ರಮುಖ ಸ್ಥಾನವನ್ನು ಗುರುತಿಸಿಕೊಂಡಿರುವ ಹಂಪಿಯಲ್ಲಿ ಕನಿಷ್ಠ ಮೂಲ ಸೌಕರ್ಯ ಇಲ್ಲದಿರುವುದು ಶೋಚನೀಯವೇ ಸರಿ.
ಇದನ್ನೂ ಓದಿ: ಯುಎಸ್ ಅಧ್ಯಕ್ಷ ಜೋ ಬೈಡನ್ ಭೇಟಿಯಾದ ಕೇಂದ್ರ ಸಚಿವ ಪಿಯೂಶ್ ಗೋಯಲ್
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.