ಬೆಂಗಳೂರು: ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶತಾಯಗತಾಯ ರಾಜ್ಯವನ್ನು ತೆಕ್ಕೆಗೆ ಪಡೆಯಲು ಬಿಜೆಪಿಯು ಮುಂದಾಗಿದೆ. ಹೀಗಾಗಿ ನಾಳೆ ಬಿಜೆಪಿ ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಮಿತ್ ಶಾ ಅವರು ರ‍್ಯಾಲಿಗೂ ಮುನ್ನವೇ ಬೆಳಗ್ಗೆ 10 ಗಂಟೆಗೆ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಬಳಿಕ ತೆಲಂಗಾಣದ ಗದ್ವಾಲ್, ನಲ್ಗೊಂಡ ಮತ್ತು ವಾರಂಗಲ್‌ನಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ಪ್ರಣಾಳಿಕೆಯ ಬಗ್ಗೆ ರಾಜ್ಯದ ಜನರಲ್ಲಿ ತೀವ್ರ ಕುತೂಹಲ ಮೂಡಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಕೊಲೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಬಿಗಿ ಮಾಡ್ತೇವೆ: ಸಚಿವೆ ಹೆಬ್ಬಾಳ್ಕರ್
ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣದ ವಿಧಾನಸಭಾ ಚುನಾವಣೆಗೆ ಅಬ್ಬರದ ಪ್ರಚಾರವನ್ನು ಕೈಗೊಂಡಿರುವ ಬಿಜೆಪಿಯು ಅನೇಕ ಕೇಂದ್ರ ಸಚಿವರುಗಳನ್ನು ಚುನಾವಣೆಗಾಗಿ ಬಳಸಿಕೊಳ್ಳಲು ಮುಂದಾಗಿದೆ. ಅಲ್ಲದೆ ಆಗಮಿಸುವ ಕೇಂದ್ರದ ನಾಯಕರಿಗೆ ಒಂದೊಂದು ಕ್ಷೇತ್ರದ ಪ್ರಚಾರದ ಹೊಣೆಯನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ದಲಿತ ಮತಗಳನ್ನು ಒಂದು ಗೂಡಿಸಿ, ಪಕ್ಷಕ್ಕೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಕಳೆದ ವಾರದಲ್ಲಿ ತೆಲಂಗಾಣಕ್ಕೆ ಆಗಮಿಸಿದ್ದ ಸಿಕಂದರಾಬಾದ್‌ಗೆ ಆಗಮಿಸಿದ್ದರು. ದಲಿತ ಸಮುದಾಯದ ರ‍್ಯಾಲಿಯಲ್ಲಿ ಭಾಗವಹಿಸಿ ಸಮಾಜದ ಮುಖಂಡ ಮಂದಕೃಷ್ಣ ಮಾದಿಗ ಅವರನ್ನು ತಮ್ಮ ಸಹೋದರ ಎಂದು ಸಂಭೋದಿಸಿದ್ದರು. ಈ ಮೂಲಕ ಆ ಸಮುದಾಯವನ್ನು ಓಲೈಸಲು ಮುಂದಾಗಿದ್ದರು.
ಇದೀಗ ಅಮಿತ್ ಆಗಮಿಸಿ ಮೂರು ರ‍್ಯಾಲಿಗಳಲ್ಲಿ ಭಾಗಿಯಾಗುವ ಮೂಲಕ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ಧಾರೆ. ಬಿಜೆಪಿಯ ಈ ಪ್ರಣಾಳಿಕೆಯು ಆಡಳಿತಾರೂಢ ಕೆಸಿಆರ್ ಸರ್ಕಾರಕ್ಕೆ ಟಕ್ಕರ್ ನೀಡಲಿದೆ ಎಂದು ಹೇಳಲಾಗುತ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.