ನವದೆಹಲಿ: ಡೀಸೆಲ್ ಚಾಲಿತ ವಾಹನಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ಸರಕು ಮತ್ತು ಸೇವಾ ತೆರಿಗೆ (GST)ಯನ್ನು ಪ್ರಸ್ತಾಪಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇಂದು ಆಟೋಮೊಬೈಲ್ ಲಾಬಿ ಗ್ರೂಪ್, ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಗಡ್ಕರಿ, ನಾನು ಈಗಾಗಲೇ ಒಂದು ಪತ್ರವನ್ನು ಸಿದ್ಧಪಡಿಸಿಟ್ಟುಕೊಂಡಿದ್ದೇನೆ. ನಾನು ಇಂದು ಸಂಜೆ ಹಣಕಾಸು ಸಚಿವರಿಗೆ ಇದನ್ನು ಹಸ್ತಾಂತರಿಸುತ್ತೇನೆ, ಡೀಸೆಲ್ ವಾಹನಗಳು ಮತ್ತು ಎಲ್ಲಾ ಎಂಜಿನ್‌ಗಳ ಮೇಲೆ ಹೆಚ್ಚುವರಿ ಶೇ.10 ರಷ್ಟು ಜಿಎಸ್‌ಟಿ ಹಾಕಲು ಪ್ರಸ್ತಾಪಿಸುತ್ತೇನೆ. ಅದು ಡೀಸೆಲ್‌ನಲ್ಲಿ ಚಲಿಸುವ ಎಲ್ಲಾ ರೀತಿಯ ವಾಹನಗಳಿಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Central Govt : ಕಚೇರಿಯ ಹಳೆ ವಸ್ತುಗಳಿಂದ ₹600 ಕೋಟಿ ಗಳಿಸಿದ ಮೋದಿ ಸರ್ಕಾರ
ಇನ್ನು ಮುಂದುವರೆದು ಮಾತನಾಡಿದ ಅವರು, ಡೀಸೆಲ್ ಚಾಲಿತ ವಾಹನಗಳ ಉತ್ಪಾದನೆ ಹಾಗೂ ಮಾರಾಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಉದ್ಯಮವೇ ಸ್ವಯಂಪ್ರೇರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದೇ, ಇದ್ದಲ್ಲಿ ಇಂಥ ವಾಹನಗಳ ಮಾರಾಟ ಹಾಗೂ ಉತ್ಪಾದನೆಗಳ ಮೇಲೆ ಕಡಿವಾಣ ಹೇರುವಂಥ ಕ್ರಮಗಳನ್ನು ಸ್ವತಃ ಸರ್ಕಾರವೇ ಕೈಗೊಳ್ಳುತ್ತದೆ. ಸರ್ಕಾರಕ್ಕೆ ಅದನ್ನು ಬಿಟ್ಟು ಬೇರೆ ದಾರಿ ಕೂಡ ಇರೋದಿಲ್ಲ ಎಂದರು.
ಡೀಸೆಲ್‌ಗೆ ವಿದಾಯ ಹೇಳಿ. ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಡೀಸೆಲ್ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗದಷ್ಟು ತೆರಿಗೆಯನ್ನು ಹೆಚ್ಚಿಸುತ್ತೇವೆ ಎಂದು ಗಡ್ಕರಿ ಹೇಳಿದರು.ಡೀಸೆಲ್ ಕಾರಿನ ಪಾಲು ಕಳೆದ ಒಂಬತ್ತು ವರ್ಷಗಳಲ್ಲಿ 2014 ರಲ್ಲಿ ಶೇ.33 ರಿಂದ ಶೇ.28 ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಂಸತ್ ಸಿಬ್ಬಂದಿಗೆ ಹೊಸ ಸಮವಸ್ತ್ರ: ಅಂಗಿ ಮೇಲೆ ಕಮಲದ ಚಿತ್ರ, ಖಾಕಿ ಪ್ಯಾಂಟ್!
ಈ ಶಿಫಾರಸಿಗೆ ಸರ್ಕಾರ ಅನುಮೋದನೆ ನೀಡಿದರೆ, ಡೀಸೆಲ್ ಕಾರುಗಳು ಮತ್ತಷ್ಟು ದುಬಾರಿಯಾಗಲಿವೆ. ಈಗಾಗಲೇ ಡೀಸೆಲ್ ವಾಹನಗಳ ಮೇಲೆ ಹೆಚ್ಚಿನ ತೆರಿಗೆ ಇದೆ. ಅದಕ್ಕೆ ಇನ್ನಷ್ಟು ಹೆಚ್ಚುವರಿಯಾಗಿ ಶೇ.10ರಷ್ಟು ಮಾಲಿನ್ಯ ತೆರಿಗೆ ಎಂದು ಸರ್ಕಾರ ವಿಧಿಸಲಿದೆ ಎಂದು ಹೇಳಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.