ವಾಷಿಂಗ್ಟನ್: ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೋಟೋವೊಂದಕ್ಕೆ ಹಾಲಿ ಅಧ್ಯಕ್ಷ ಜೋ ಬೈಡನ್ ಅವರು ಕಾಮೆಂಟ್ ಮಾಡಿದ್ದು, ಟ್ರಂಪ್ ಅವರನ್ನು ಹ್ಯಾಂಡ್‌ಸಮ್ ಗಾಯ್ ಎಂದು ಕರೆದಿದ್ದಾರೆ.
2020ರ ಅಮೇರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಬುಡಮೇಲು ಮಾಡಲು ಯತ್ನಿಸಿದ ಪ್ರಕರಣದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದ್ದು, ಬಳಿಕ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಡೊನಾಲ್ಡ್ ಟ್ರಂಪ್ ಕಳೆದ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ಅವರ ವಿರುದ್ಧ ದಾಖಲಾಗಿದ್ದವು. ಈ ಆರೋಪ ಹಿನ್ನೆಲೆ ಜಾರ್ಜಿಯಾ ಪೊಲೀಸರು ಔಪಚಾರಿಕವಾಗಿ ಟ್ರಂಪ್ ಅವರನ್ನು ಬಂಧಿಸಿ 200,000 ಡಾಲರ್ ಮೌಲ್ಯದ ಬಾಂಡ್ ಶ್ಯೂರಿಟಿ ನೀಡಿದ ಬಳಿಕ ಜಾಮೀನಿನ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಅಧಿಕಾರ ದುರುಪಯೋಗ ಆರೋಪ; ಡೊನಾಲ್ಡ್ ಟ್ರಂಪ್ ಬಂಧನ!
ಇತ್ತೀಚೆಗೆ ಟ್ರಂಪ್ ಅವರ ನಗುವಿಲ್ಲದ ಮಗ್ ಶಾಟ್ ಫೋಟೋವೊಂದು ಬಿಡುಗಡೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಜೋ ಬೈಡನ್, ಟ್ರಂಪ್ ಅವರನ್ನು Handsome guy, wonderful guy ಎಂದು ಕರೆದಿದ್ದಾರೆ.
ಇನ್ನು ಟ್ರಂಪ್ ಅವರನ್ನು ಸುಮಾರು 20 ನಿಮಿಷಗಳ ಕಾಲ ಜೈಲಿನೊಳಗೆ ಇಡಲಾಗಿತ್ತು. ಅಮೇರಿಕಾ ಇತಿಹಾಸದಲ್ಲೇ ಅಧ್ಯಕ್ಷ ಸ್ಥಾನಕ್ಕೇರಿದ ವ್ಯಕ್ತಿಯೋರ್ವ ಮೊದಲ ಬಾರಿ ಜೈಲು ಸೇರಿ ಬಿಡುಗಡೆಯಾಗಿದ್ದಾರೆ. ಅಲ್ಲದೆ ಮುಂದಿನ ವರ್ಷದಲ್ಲಿ ನಡೆಯಲಿರುವ ಅಮೇರಿಕಾ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬೈಡನ್‌ಗೆ ಪೈಪೋಟಿ ನೀಡಲು ಟ್ರಂಪ್ ಸಜ್ಜಾಗಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.