ನವದೆಹಲಿ: ನಾಳೆಯಿಂದ G20 ಶೃಂಗಸಭೆಗಾಗಿ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ. ಇನ್ನು ಈ ಸಭೆಯಲ್ಲಿ ಹಾಜರಾಗಲು ಈಗಾಗಲೇ ವಿವಿಧ ರಾಷ್ಟ್ರಗಳ ನಾಯಕರು ದೆಹಲಿಗೆ ಆಗಮಿಸಿದ್ದಾರೆ.
ಇದೀಗ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಕೂಡ ದೆಹಲಿಗೆ ಬಂದಿಳಿದಿದ್ದಾರೆ.


ಇನ್ನು ಬೈಡನ್ ಅವರು ಅಮೇರಿಕಾ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದಾರೆ. ಬೈಡನ್ ಅವರನ್ನು ದೆಹಲಿಯಲ್ಲಿ ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು ಭರ್ಜರಿಯಾಗಿ ಸ್ವಾಗತ ಕೋರಿದರು.


ಬಳಿಕ ಬೈಡನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಶೃಂಗಸಭೆಗೂ ಮುನ್ನವೇ ಬೈಡನ್ ಹಾಗೂ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಹಿಂದೆ G20 ಶೃಂಗಸಭೆಗೆ ಜೋ ಬೈಡನ್ ಹಾಜರಾಗುತ್ತಿಲ್ಲ ಎಂದು ಹೇಳಲಾಗಿತ್ತು. ನಂತರ ಅವರು ಸಭೆಗೆ ಬರಲಿದ್ದಾರೆ ಎಂದು ಅಮೇರಿಕಾ ಶ್ವೇತಭವನ ಖಚಿತಪಡಿಸಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.