ವಾಷಿಂಗ್ಟನ್: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಭಾರತದಲ್ಲಿ ನಡೆಯಲಿರುವ G20 ಶೃಂಗಸಭೆಗೆ ಬರುವುದು ಅಧಿಕೃತವಾಗಿದೆ. ಈ ಸಭೆಗಾಗಿ ಬಿಡೆನ್ ಎರಡು ದಿನ ಮುನ್ನವೇ ಭಾರತಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 9ರಂದು G20 ಶೃಂಗಸಭೆ ನವದೆಹಲಿಯಲ್ಲಿ ಶುರುವಾಗಲಿದ್ದು, ಬಿಡೆನ್ ಸೆಪ್ಟೆಂಬರ್ 7ರಂದೇ ಭಾರತದತ್ತ ಹಾರಲಿದ್ದಾರೆ. ಸಭೆಗೂ ಮುನ್ನ ಬಿಡೆನ್ ಸೆಪ್ಟೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಅಮೇರಿಕಾದ ಶ್ವೇತಭವನ ತಿಳಿಸಿದೆ.
ಈ ಹಿಂದೆ G20 ಶೃಂಗಸಭೆಗೆ ಜೋ ಬಿಡನ್ ಹಾಜರಾಗುತ್ತಿಲ್ಲ ಎಂದು ಹೇಳಲಾಗಿತ್ತು. ಇದೀಗ ಅವರ ಬರುವಿಕೆ ಅಧಿಕೃತವಾಗಿದೆ.


ದೆಹಲಿಯಲ್ಲಿ ಕಟ್ಟೆಚ್ಚರ: ಇನ್ನು ಜಿ20 ಶೃಂಗಸಭೆ ನಡೆಯುತ್ತಿರುವ ಹಿನ್ನೆಲೆ ದೆಹಲಿಯಲ್ಲಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದ್ದು, ಇಂದಿನಿಂದಲೇ ದೆಹಲಿಯ ವಿವಿಧ ಸ್ಥಳಗಳಲ್ಲಿ ಎನ್‌ಎಸ್‌ಜಿ ಬಾಂಬ್ ಸ್ಕ್ವಾಡ್ ವಿರೋಧಿ ತಂಡವು ತೀವ್ರ ತಪಾಸಣೆ ನಡೆಸಿವೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.