ಬೆಳಗಾವಿ : ಇಲ್ಲಿನ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣ ಮಾಸುವ ಮುನ್ನವೇ, ಜೈಲಿನೊಳಗೆ ಕೈದಿಗಳು ಮೊಬೈಲ್ ಬಳಸುತ್ತಿರುವ ವಿಚಾರ ಬಯಲಾಗಿದೆ.
ಜೈಲಿನೊಳಗೆ ಮೊಬೈಲ್ ಬಳಸಿದ ವಿಚಾರಣಾಧೀನ ಕೈದಿಗಳಾದ ಅಬುಬಕರ ಕಾಠೆ, ಸಾಯಿಕುಮಾರ ಅಲಿಸಾಯ, ಸುರೇಶ ಕುಣಿಗಲ್ ಮತ್ತು ಶಿಕ್ಷಾಬಂಧಿ ಕೈದಿಯಾದ ರಾಹುಲ್ ಘಾಟಗೆ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಿಂಡಲಗಾ ಜೈಲಿನ ಡೆಪ್ಯೂಟಿ ಸೂಪರಿಂಟೆಂಡೆಂಟ್ ವಿ.ಕೃಷ್ಣಮೂರ್ತಿಯಿ ಎಫ್ಐಆರ್ ದಾಖಲಿಸಿದ್ದಾರೆ. ಕೈದಿಗಳು ಜೈಲಿನೊಳಗೆ ಮೊಬೈಲ್ ಬಳಸಿದ ವಿಡಿಯೋ ಪೊಲಿಟಿಕಲ್ 360ಗೆ ಲಭ್ಯವಾಗಿದೆ.
ಮೊಬೈಲ್ ಬಳಕೆ ಆರೋಪಿತ ಕೈದಿಗಳು ಜೈಲಿನ ಒಳಗಿನ ವಿಡಿಯೋ ಮಾಡಿ ಮಾಧ್ಯಮಗಳಿಗೆ ನೀಡುತ್ತಿದ್ದರು ಎನ್ನಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಇನ್ಸ್ ಪೆಕ್ಟರ್ ಮಂಜುನಾಥ ಹಿರೇಮಠ ನೇತೃತ್ವದ ತನಿಖೆಗೆ ತಂಡ ರಚಿಸಿದ್ದಾರೆ. ಈಗಾಗಲೇ ತನಿಖೆ ಪ್ರಾರಂಭಗೊಂಡಿದೆ.
ಇದನ್ನೂ ಓದಿ : ‘ಸುಪ್ರೀಂನಿಂದ ಬೈಸ್ಕೊಳ್ಳೋಕೆ ನಾವು ಸಿದ್ದರಿಲ್ಲ, ನೀರು ಬಿಡಲು ನಾನು ಸೂಚಿಸಿಲ್ಲ’
ಪದೇ ಪದೇ ಜೈಲಿನಲ್ಲಿ ಮೊಬೈಲ್ ಬಳಕೆ ಪತ್ತೆಯಾಗ್ತಿದೆ. ಈ ಹಿಂದೆಯೂ ಕೈದಿಗಳು ಮೊಬೈಲ್ ಬಳಕೆ ಮಾಡಿ ಸಿಕ್ಕಿ ಬಿದ್ದಿದ್ದಾಗ ಇಬ್ಬರು ಜೈಲು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿತ್ತು. ಮತ್ತಿಬ್ಬರು ಜೈಲು ಸಿಬ್ಬಂದಿ ಅಮಾನತಾಗಿದ್ದರು. ಇದೀಗ ಮತ್ತೊಮ್ಮೆ ಮೊಬೈಲ್ ಬಳಕೆ ಬಯಲಾಗಿದ್ದು, ಜೈಲಿನೊಳಗೆ ಮೊಬೈಲ್ ಹೇಗೆ ಬರ್ತಿದೆ ಎಂಬ ಪ್ರಶ್ನೆ ಎದ್ದಿದೆ. ಜೈಲು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣ್ತಿದೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.